Photo Credit X
ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳ ಪೈಕಿ ಸುರಕ್ಷಿತವಾಗಿ ಮರಳಿದ 21 ಭಾರತೀಯರ ಗುಂಪನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶುಕ್ರವಾರ ಭೇಟಿಯಾದರು.ಕಾಠ್ಮಂಡುವಿನ ಮೂಲಕ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಈ 21 ಯಾತ್ರಾರ್ಥಿಗಳನ್ನು, ಸಚಿವರು "ಅತ್ಯಂತ ಕಠಿಣವಾದ ಸ್ಥಳ ಎಂದು ಬಣ್ಣಿಸಿದ ಪ್ರದೇಶದಿಂದ ನೇಪಾಳದ ಸೇನೆಯು ರಕ್ಷಿಸಿತ್ತು.
ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯರ ಗುಂಪನ್ನು ನಾನು ಇದೀಗ ಭೇಟಿಯಾದೆ. ಪ್ರವಾಹದ ನಂತರ ಅವರನ್ನು ರಕ್ಷಿಸಲಾಯಿತು ಮತ್ತು ಕಾಠ್ಮಂಡುವಿಗೆ ಕರೆತರಲಾಯಿತು. ನೇಪಾಳಿ ಸೇನೆಯು ಅವರನ್ನು ರಕ್ಷಿಸಿತು, ನಂತರ ನಮ್ಮ ರಾಯಭಾರ ಕಚೇರಿಯು ಅವರು ವಾಪಸಾಗಲು ವ್ಯವಸ್ಥೆ ಮಾಡಿತು ಎಂದು ಅವರು ಹೇಳಿದರು.
ಅವರನ್ನು ಭೇಟಿಯಾಗಲು, ಅವರು ಸುರಕ್ಷಿತವಾಗಿರುವುದಕ್ಕೆ ನಮ್ಮ ಸಂತೋಷ ಮತ್ತು ನಿರಾಳತೆಯನ್ನು ಹಂಚಿಕೊಳ್ಳಲು ಹಾಗೂ ಅವರ ಅನುಭವಗಳ ಬಗ್ಗೆ ತಿಳಿದುಕೊಳ್ಳಲು ನಾನು ಬಂದಿದ್ದೇನೆ ಎಂದು ಜೈಶಂಕರ್ ಹೇಳಿದರು.

