ರವೀ (34) ಎಂಬ ವ್ಯಕ್ತಿ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಹಠಾತ್ತನೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ರವಿ, ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿದ್ದಾರೆ. ಅದೇ ಸಮಯದಲ್ಲಿ ಗಸ್ತಿನಲ್ಲಿದ್ದ 'ಹೊಯ್ಸಳ-88' ವಾಹನದ ಸಿಬ್ಬಂದಿ, ರಸ್ತೆಯ ಬದಿಯಲ್ಲಿ ತೀವ್ರ ಯಾತನೆಯಿಂದ ಒದ್ದಾಡುತ್ತಿದ್ದ ರವಿಯವರನ್ನು ಗಮನಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಗ್ರಹಿಸಿದ ಹೊಯ್ಸಳ ಸಿಬ್ಬಂದಿ, ತಡಮಾಡದೇ ರವಿಯವರಿಗೆ ಪ್ರಥಮ ಚಿಕಿತ್ಸೆಯಾಗಿ 'ಸಿಪಿಆರ್' (ಕೃತಕ ಉಸಿರಾಟ ಮತ್ತು ಎದೆ ಒತ್ತುವ ಚಿಕಿತ್ಸೆ) ನೀಡಿದ್ದಾರೆ. ಪೋಲೀಸರ ಈ ಸಮಯೋಚಿತ ನಡೆಯಿಂದಾಗಿ ರವಿಯವರ ಜೀವ ಉಳಿದಿದ್ದು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಯಪ್ರಜ್ಞೆ ಮೆರೆದು ಜೀವರಕ್ಷಕರಾದ ಹೊಯ್ಸಳ-88 ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ಕ್ಷಿಪ್ರ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
pic.twitter.com/bmvOE1PhLv

