
ಕಾಂಗ್ರೆಸ್ ಶಾಸಕರು ನೀಡಲು ಮುಂದಾಗಿರುವುದು ಶಾಸಕರ ಕ್ಷೇತ್ರಕ್ಕೆ ಮೀಸಲಾಗಿಡುವ ಅನುದಾನವನ್ನೇ ಹೊರತು ಕಾಂಗ್ರೆಸ್ ನಾಯಕರು ಸ್ವಂತ ವೆಚ್ಚ ಮಾಡುತ್ತಿರುವುದಲ್ಲ. ಇದಕ್ಕೆ ಯಾಕೆ ಇಷ್ಟೊಂದು ಬಿಲ್ಡಪ್ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಾಯಕರು 100 ಕೋಟಿ ರೂ. ದೇಣಿಗೆ ನೀಡಲಿದ್ದಾರೆ. ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿ, ಕೊರೋನಾ ತೊಲಗುವಂತಾಗಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.