Photo Courtesy X
ಬೆಂಗಳೂರು: ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೃಷ್ಣ ಭೈರೇಗೌಡ ಅವರ ಸರಳ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ಕೃಷ್ಣ ಭೈರೇಗೌಡ ಅವರು ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಹೋಗುವ ವೇಳೆ ವಾಹನವನ್ನು ಬಳಸುವ ಬದಲು ನಡೆದುಕೊಂಡೆ ಹೋಗಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಚ್ಚಿನ ಸೆಕ್ಯೂರಿಟಿ ಇಲ್ಲದೆ, ಜನ ಸಾಮಾನ್ಯರಂತೆ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಇಂದು ನಗರದಾದ್ಯಂತ ಹೆಚ್ಚಿನ ಜನಸಂದಣಿ ಇದ್ದ ಹಿನ್ನೆಲೆ ಸಚಿವರು ಹೀಗೇ ನಡೆದುಕೊಂಡರು ಎನ್ನಲಾಗಿದೆ.

