Photo Credit X
ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರು ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಮೈದಾನದಲ್ಲಿ ಬೌಲರ್ ಆಗಿ ಮಿಂಚಿದ್ದ ಜಹೀರ್ ಈಗ ಉದ್ಯಮಿಯಾಗಿ ಫ್ರಾಂಚೈಸಿ ಕ್ರಿಕೆಟ್ ಪ್ರವೇಶಿಸಿದ್ದಾರೆ.ಶ್ರೀಲಂಕಾದ ಪ್ರಮುಖ ಟಿ20 ಕ್ರಿಕೆಟ್ ಲೀಗ್ ಆಗಿರುವ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (ಎಲ್‌ಪಿಎಲ್) ಜಾಫ್ನಾ ಕಿಂಗ್ಸ್‌ನ ಸಹ-ಮಾಲೀಕರಾಗಿ ಹೊಸ ಇನಿಂಗ್ಸ್ ಶುರು ಮಾಡಿದ್ದಾರೆ.
ಈ ಹೊಸ ಒಡೆತನದ ನಂತರ ತಂಡವನ್ನು ಆಂಕರ್ ಜಾಫ್ನಾ ಕಿಂಗ್ಸ್ ಎಂದು ಮರುನಾಮಕರಣ ಮಾಡಲಾಗಿದೆ.
ಜಹೀರ್ ಖಾನ್ ಅವರು ಫ್ರಾಂಚೈಸಿ ಒಂದರ ಮಾಲೀಕರಾಗಿ ಲಂಕಾ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡುತ್ತಿರುವುದು ಇದೇ ಮೊದಲು.
ಜಾಫ್ನಾ ಕಿಂಗ್ಸ್ ತಂಡವು ಎಲ್‌ಪಿಎಲ್ ಅತ್ಯಂತ ಯಶಸ್ವಿ ತಂಡವಾಗಿದ್ದು, ಇದುವರೆಗೆ ನಡೆದ ಐದು ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್ ಆಗಿದೆ.

