Dailyhunt Logo
  • Light mode
    Follow system
    Dark mode
    • Play Story
    • App Story
ಗಂಡನಿಗೆ ಏನು ಹೇಳ್ತೀರಾ ಅಂದ್ರೆ ನಾಚಿಕೊಂಡು ಏನು ಹೇಳಿದ್ರು ನೋಡಿ ಡಿಕೆ ಶಿವಕುಮಾರ್ ಪತ್ನಿ Video

ಗಂಡನಿಗೆ ಏನು ಹೇಳ್ತೀರಾ ಅಂದ್ರೆ ನಾಚಿಕೊಂಡು ಏನು ಹೇಳಿದ್ರು ನೋಡಿ ಡಿಕೆ ಶಿವಕುಮಾರ್ ಪತ್ನಿ Video

ಬೆಂಗಳೂರು: ಡಿಕೆ ಶಿವಕುಮಾರ್ ಅವರ ಅಧಿಕಾರದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯಾಗಲಿ, ಅವರಿಂದ ಜನತೆಗೆ ಒಳ್ಳೆಯದಾಗಲಿ ಎಂದು ಪತ್ನಿ ಉಷಾ ನಾಚುತ್ತಲೇ ಪ್ರತಿಕ್ರಿಯಿಸಿದರು. ಡಿಕೆ ಶಿವಕುಮಾರ್ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡ ಉಷಾ ಅವರಲ್ಲಿ ಮಾಧ್ಯಮದವರು ಡಿಕೆಶಿಗೆ ಏನ್ ವಿಶ್ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ನಗುತ್ತಾ, ನಾಚುತ್ತ ಪ್ರತಿಕ್ರಿಯಿಸಿದ ಉಷಾ ನನ್ನ ಪತಿಗೆ ಆಲ್‌ ದಿ ಬೆಸ್ಟ್‌ ಎಂದು ಹಾರೈಸಲು ಇಚ್ಛಿಸುತ್ತೇನೆ. ಅವರ ಅಧಿಕಾರವಧಿಯಲ್ಲಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ, ಅವರಿಂದ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿ, ನಾಚಿಕೊಂಡರು.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.


ಈ ಅಮೂಲ್ಯ ಕ್ಷಣಕ್ಕೆ ಡಿಕೆ ಶಿವಕುಮಾರ್‌ ಕುಟುಂಬವು ಸಾಕ್ಷಿಯಾಯಿತು. ಡಿಕೆ ಶಿವಕುಮಾರ್ ಪತ್ನಿ ಉಷಾ, ಪುತ್ರಿ ಐಶ್ವರ್ಯಾ, ಅಳಿಯ ಅಮರ್ಥ್ಯ, ಹಾಗೂ ಪುತ್ರ ಕೂಡಾ ಈ ಸಮಾರಂಭದಲ್ಲಿ ಭಾಗವಹಿಸಿ, ಡಿಕೆ ಶಿವಕುಮಾರ್ ರಾಜಕೀಯ ಬದುಕಿನ ಪ್ರಮುಖ ಘಟ್ಟವನ್ನು ಕಣ್ತುಂಬಿಕೊಂಡರು.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada