Dailyhunt Logo
  • Light mode
    Follow system
    Dark mode
    • Play Story
    • App Story
ಹಾವು ಹಿಡಿಯುತ್ತಿದ್ದಾಗ ಅರೆಗಳಿಗೆ ಎಚ್ಚರ ತಪ್ಪಿದ್ದಷ್ಟೇ. ಉರಗ ತಜ್ಞ ಸ್ಥಳದಲ್ಲೇ ಸಾವು: ಶಾಕಿಂಗ್ ವಿಡಿಯೋ ಇಲ್ಲಿದೆ

ಹಾವು ಹಿಡಿಯುತ್ತಿದ್ದಾಗ ಅರೆಗಳಿಗೆ ಎಚ್ಚರ ತಪ್ಪಿದ್ದಷ್ಟೇ. ಉರಗ ತಜ್ಞ ಸ್ಥಳದಲ್ಲೇ ಸಾವು: ಶಾಕಿಂಗ್ ವಿಡಿಯೋ ಇಲ್ಲಿದೆ

ಶ್ಚಿಮ ಬಂಗಾಳ: ನಿರಂತರವಾಗಿ ಜನರ ಮನೆಗಳಿಗೆ ನುಗ್ಗುತ್ತಿದ್ದ ವಿಷಪೂರಿತ ಹಾವುಗಳನ್ನು ರಕ್ಷಿಸಿ, ಪ್ರಕೃತಿಯ ಮಡಿಲಿಗೆ ಬಿಡುತ್ತಿದ್ದ ಪಶ್ಚಿಮ ಬಂಗಾಳದ ಮಿಡ್ನಾಪುರ (ಮೇದಿನಿಪುರ) ಮೂಲದ ಪ್ರಸಿದ್ಧ ಉರಗ ರಕ್ಷಕ ತಪನ್ ಸಿನ್ಹಾ ಅವರ ಆಕಸ್ಮಿಕ ಸಾವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಕೇವಲ ಒಂದು ಸಣ್ಣ ಉದಾಹಸೀನತೆ ಮತ್ತು ಆಸ್ಪತ್ರೆಗೆ ತೆರಳಲು ಮಾಡಿದ ವಿಳಂಬ ಒಬ್ಬ ನುರಿತ ತಜ್ಞನ ಜೀವವನ್ನೇ ಬಲಿ ಪಡೆದಿದೆ.

ಕ್ಯಾಮೆರಾ ಕಣ್ಣಂದಿನಲ್ಲೇ ನಡೆದ ದುರಂತ:
ಸೋಮವಾರ ಸಂಜೆ ಮಿಡ್ನಾಪುರದ ನಿವಾಸಿಯೊಬ್ಬರ ಮನೆಗೆ ನುಗ್ಗಿದ್ದ ಹಾವನ್ನು ರಕ್ಷಿಸಲು ತಪನ್ ಸಿನ್ಹಾ ತೆರಳಿದ್ದರು. ಹಾವನ್ನು ಹಿಡಿಯುವ ಸಾಹಸದ ವೇಳೆ ವಿಷಕಾರಿ ಹಾವು ಅವರ ಕೈಗೆ ದಿಢೀರನೆ ಕಚ್ಚಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ, ನೂರಾರು ಹಾವುಗಳನ್ನು ಹಿಡಿದು ಅನುಭವವಿದ್ದ ತಪನ್ ಸಿನ್ಹಾ, ಈ ವಿಷಕಡಿತವನ್ನು ತೀರ ಹಗುರವಾಗಿ ಪರಿಗಣಿಸಿದರು. ಕಚ್ಚಿದ ತಕ್ಷಣ ಆಸ್ಪತ್ರೆಗೆ ಧಾವಿಸುವ ಬದಲು, ಅವರು ಯಾರಿಗೂ ವಿಷಯ ತಿಳಿಸದೇ ನೇರವಾಗಿ ಮನೆಗೆ ತೆರಳಿ ಮಲಗಿದ್ದಾರೆ. ದೇಹದಾದ್ಯಂತ ವಿಷ ಆವರಿಸಿದ ಪರಿಣಾಮ, ಅರ್ಧರಾತ್ರಿಯ ವೇಳೆಗೆ ಅವರ ಜೀವಪಕ್ಷಿ ಹಾರಿಹೋಗಿದೆ.

ಅನುಭವಕ್ಕಿಂತ ಜಾಗರೂಕತೆ ಮುಖ್ಯ:
ತಪನ್ ಸಿನ್ಹಾ ಅವರ ಈ ದುರಂತ ಸಾವು ಉರಗ ರಕ್ಷಕರಿಗೂ ಹಾಗೂ ಸಾರ್ವಜನಿಕರಿಗೂ ಒಂದು ದೊಡ್ಡ ಪಾಠವಾಗಿದೆ. ಎಷ್ಟೇ ಅನುಭವವಿದ್ದರೂ ಸುರಕ್ಷತಾ ಗ್ಲೌಸ್‌ಗಳು ಮತ್ತು ರಕ್ಷಣಾತ್ಮಕ ಉಪಕರಣಗಳನ್ನು ಧರಿಸದೇ ಹಾವುಗಳನ್ನು ಹಿಡಿಯುವುದು ಅತ್ಯಂತ ಅಪಾಯಕಾರಿ. ಎಷ್ಟೇ ದೊಡ್ಡ ತಜ್ಞರಾಗಿದ್ದರೂ ಪ್ರಕೃತಿಯ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿದರೆ ಜೀವಕ್ಕೇ ಕಂಟಕ ಎಂಬುವುದಕ್ಕೆ ತಪನ್ ಸಿನ್ಹಾ ಅವರ ಘಟನೆಯೇ ಸಾಕ್ಷಿ.

pic.twitter.com/dVtflQ9XzU - Raghu (@IndiaTales7)

Dailyhunt
Disclaimer: This content has not been generated, created or edited by Dailyhunt. Publisher: Webduniya Kannada