Photo Credit: X
ನವದೆಹಲಿ: ಹೆಸರಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ. ಆದರೆ ನಾಯಕನ ಹುದ್ದೆಯಲ್ಲಿರುವ ಅಕ್ಷರ್ ಪಟೇಲ್ ಗೆ ತಮ್ಮ ತಂಡ ಎಷ್ಟು ಪಂದ್ಯವಾಡಿದೆ ಎಂದೇ ಗೊತ್ತಿಲ್ಲ.ಐಪಿಎಲ್ 2026 ರಲ್ಲಿ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ನಡೆದಿದ್ದ ಪಂದ್ಯವನ್ನು ಡೆಲ್ಲಿ 8 ವಿಕೆಟ್ ಗಳಿಂದ ಸೋತಿದೆ.
ಈ ಸೋಲಿನ ಹೊರತಾಗಿಯೂ ಡೆಲ್ಲಿಗೆ ಪ್ಲೇ ಆಫ್ ಗೇರುವ ಕ್ಷೀಣ ಅವಕಾಶವಿದೆ. ಇದಕ್ಕೆ ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಗೆಲ್ಲಬೇಕಿದೆ.
ಆದರೆ ನಾಯಕ ಅಕ್ಷರ್ ಪಟೇಲ್ ಗೆ ಎಷ್ಟು ಪಂದ್ಯ ಆಡಿದ್ದೇವೆ, ಇನ್ನು ಎಷ್ಟು ಉಳಿದಿದೆ ಎನ್ನುವುದೇ ಮರೆತು ಹೋಗಿದೆ. ನಾವು ಇನ್ನು ಐದು ಪಂದ್ಯ ಆಡಬೇಕಿದೆ ಎಂದು ಅಕ್ಷರ್ ಹೇಳಿದ್ದಾರೆ. ಅಂದರೆ ಅಕ್ಷರ್ ಗೆ ಇನ್ನು ಎಷ್ಟು ಪಂದ್ಯವಿದೆ ಎನ್ನುವ ಖಚಿತ ಮಾಹಿತಿ ಇಲ್ಲ ಎಂದಾಯ್ತು.

ಈ ಕುರಿತಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಸೋತ ಪಂದ್ಯಗಳ ಲೆಕ್ಕವೇ ಗೊತ್ತಿಲ್ಲ, ಎಷ್ಟು ಪಂದ್ಯ ಬಾಕಿಯಿದೆ ಎಂದೂ ಗೊತ್ತಿಲ್ಲ. ಈತನನ್ನು ನಂಬಿ ಡೆಲ್ಲಿ ಪ್ಲೇ ಆಫ್ ಗೆ ಹೋದ ಹಾಗೇ ಎಂದು ಟ್ರೋಲ್ ಮಾಡಿದ್ದಾರೆ.