Photo Credit X
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಗುರುವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿತು.ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡವು ಆರ್‌ಸಿಬಿ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿ, ಗೆಲುವಿನ ಹಳಿಗೆ ಮರಳಿತು.
ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನಕ್ಕೇರುವ ಅವಕಾಶ ಪಡೆದಿದ್ದ ಆರ್‌ಸಿಬಿ ತಂಡವು ನಿರಾಸೆ ಅನುಭವಿಸಿತು.
ಆತಿಥೇಯ ಗುಜರಾತ್ ಟೈಟನ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಡುಕೊಂಡಿತು. ಆರ್‌ಸಿಬಿ ತಂಡವು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಸರ್ವಪತನ ಕಂಡ ರಜತ್ ಪಾಟೀದಾರ್ ಬಳಗ, ಈ ಬಾರಿ ಮೊದಲ ಸಲ ಆಲೌಟ್ ಆಯಿತು. ಕನ್ನಡಿಗ ದೇವದತ್ತ ಪಡಿಕ್ಕಲ್ (40 ರನ್) ಮಾತ್ರ ಹೋರಾಟ ತೋರಿದರು. ಇದೇ ಮೊದಲ ಬಾರಿಗೆ ಆರ್‌ಸಿಬಿ ತಂಡವು ಆಲೌಟ್ ಆಯಿತು.
ಜೇಕಬ್ ಬೆಥೆಲ್ ಜೊತೆ ಇನಿಂಗ್ಸ್ ಆರಂಭಿಸಿದ ಅನುಭವಿ ವಿರಾಟ್ ಕೊಹ್ಲಿ (13 ಎಸೆತ, 28 ರನ್), ಬಿರುಸಿನ ಆರಂಭ ನೀಡಿದರು. ಎರಡನೇ ಓವರ್‌ನಲ್ಲಿ ವೇಗಿ ಕಗಿಸೊ ರಬಾಡಗೆ ಸತತ ಐದು ಬೌಂಡರಿ ಬಾರಿಸಿದ ಅವರು, ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದರು. ಆದರೆ, ಆ ಲೆಕ್ಕಾಚಾರವು ಮುಂದಿನ ಓವರ್‌ನಲ್ಲೇ ತಲೆಕೆಳಗಾಯಿತು.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೆಥೆಲ್ (5) ವಿಕೆಟ್ ಪಡೆದು, ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ಮೊಹಮ್ಮದ್ ಸಿರಾಜ್ ತಮ್ಮ ತಂಡಕ್ಕೆ ಮೊದಲ ಮೇಲುಗೈ ತಂದುಕೊಟ್ಟರು. ನಂತರದ ಓವರ್‌ನಲ್ಲಿ ಕೊಹ್ಲಿಯನ್ನು ರಬಾಡ ಔಟ್ ಮಾಡಿದರು.
ಇದರ ಬೆನ್ನಲ್ಲೇ, ಆರ್‌ಸಿಬಿ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ರಜತ್ 19 ರನ್ ಗಳಿಸಿ ಔಟಾದರೆ, ಜಿತೇಶ್ ಶರ್ಮಾ (1) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಟಿಮ್ ಡೆವಿಡ್ (7), ಕೃಣಾಲ್ ಪಾಂಡ್ಯ (4) ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಇನಿಂಗ್ಸ್ ಬೆಳೆಸುವ ಪ್ರಯತ್ನ ಮಾಡಿದ ಕನ್ನಡಿಗ ದೇವದತ್ತ ಪಡಿಕ್ಕಲ್, 24 ಎಸೆತಗಳಲ್ಲಿ 40 ರನ್ ಗಳಿಸಿದರು.
ಕೊನೆಯಲ್ಲಿ, ರೊಮಾರಿಯೊ ಶೆಫೆರ್ಡ್ (17), ವೆಂಕಟೇಶ್ ಅಯ್ಯರ್ (12) ಮತ್ತು ಭುವನೇಶ್ವರ್ ಕುಮಾರ್ (ಅಜೇಯ 15 ರನ್) ಅಲ್ಪ ಕಾಣಿಕೆ ನೀಡಿದರು. ಹೀಗಾಗಿ, ತಂಡದ ಮೊತ್ತ 150ರ ಗಡಿ ದಾಟಿತು.
ಗುಜರಾತ್ ಪರ ಅರ್ಷದ್ ಖಾನ್ ಮೂರು ವಿಕೆಟ್ ಪಡೆದರೆ, ಜೇಸನ್ ಹೋಲ್ಡರ್ ಎರಡು ವಿಕೆಟ್ ಕಿತ್ತರು. ಸಿರಾಜ್ ಹಾಗೂ ರಬಾಡ ಒಂದೊಂದು ವಿಕೆಟ್ ಹಂಚಿಕೊಂಡರು.
ಗುರಿ ಬೆನ್ನಟ್ಟಿದ ಗುಜರಾತ್ ತಂಡವು ಇನ್ನೂ 25 ಎಸೆತಗಳು ಇರುವಂತೆ ಆರು ವಿಕೆಟ್‌ಗೆ 158 ರನ್ ಗಳಿಸಿ ಗೆಲುವು ಸಾಧಿಸಿತು. ನಾಯಕ ಶುಭಮನ್ ಗಿಲ್ (43) ಮತ್ತು ಜೋಸ್ ಬಟ್ಲರ್ (39) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲೂ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದು ಮಿಂಚಿದರು.