Dailyhunt
ಜನರಿಗೆ ಚಾಕು ತೋರಿಸಿ‌ ಸುಲಿಗೆ ಮಾಡುತ್ತಿದ ಆರೋಪಿಗಳ ಬಂಧನ

ಜನರಿಗೆ ಚಾಕು ತೋರಿಸಿ‌ ಸುಲಿಗೆ ಮಾಡುತ್ತಿದ ಆರೋಪಿಗಳ ಬಂಧನ

ಬೆಂಗಳೂರು: ಜನರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

17 ಲಕ್ಷ ಮೌಲ್ಯದ ಚಿನ್ನಾಭರಣ ವಶಪರಮೇಶ್ವರಯ್ಯ, ಜಗದೀಶ್, ಶಶಿಕುಮಾರ್ ಬಂಧಿತರು. ಈ ಆರೋಪಿಗಳು ಬೆಳಗ್ಗೆ ಅಥವಾ ಸಂಜೆಯ ಹೊತ್ತಲ್ಲಿ ವಾಕಿಂಗ್ ಮಾಡುತ್ತಿದ್ದ ಜನರಿಗೆ ಚಾಕು ತೋರಿಸಿ ಸರ ಕಿತ್ತುಕೊಳ್ತಿದ್ದರು.
ಸದ್ಯ ಇವರಿಂದ 17 ಲಕ್ಷ ರೂ ಮೌಲ್ಯದ 247 ಗ್ರಾಂ ಚಿನ್ನಾಭರಣ, ಒಂದು ಚಾಕು ಮತ್ತು ಒಂದು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

crio

Dailyhunt
Disclaimer: This content has not been generated, created or edited by Dailyhunt. Publisher: Webduniya Kannada