Saturday, 28 Nov, 10.01 am ವೆಬ್ದುನಿಯಾ

ಕ್ರಿಕೆಟ್
ಕೆಎಲ್ ರಾಹುಲ್ ಬಳಿ ಬ್ಯಾಟಿಂಗ್ ಮಾಡುವಾಗ ಕ್ಷಮೆ ಕೇಳಿದ್ದರಂತೆ ಗ್ಲೆನ್ ಮ್ಯಾಕ್ಸ್ ವೆಲ್

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ಕೆಎಲ್ ರಾಹುಲ್ ಬಳಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಕ್ಷಮೆ ಯಾಚಿಸಿದ್ದರಂತೆ! ಅದಕ್ಕೆ ಕಾರಣವೇನು ಗೊತ್ತಾ?

ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದರೆ, ಮ್ಯಾಕ್ಸ್ ವೆಲ್ ಕೂಡಾ ಸದಸ್ಯರಾಗಿದ್ದರು. ಆದರೆ ಐಪಿಎಲ್ ನಲ್ಲಿ ಪ್ಲಾಪ್ ಶೋ ಕೊಟ್ಟಿದ್ದ ಮ್ಯಾಕ್ಸ್ ವೆಲ್ ಈಗ ನಿನ್ನೆಯ ಪಂದ್ಯದಲ್ಲಿ ಭರ್ಜರಿ ಆಟವಾಡಿದ್ದರು. ಹೀಗಾಗಿ ಟ್ವಿಟರ್ ನಲ್ಲಿ ರಾಹುಲ್ ತಮ್ಮ ಐಪಿಎಲ್ ಆಟಗಾರರ ಪ್ರದರ್ಶನವನ್ನು ಅಸಮಾಧಾನದಿಂದ ನೋಡುವಂತಹ ಮೆಮೆ ಪ್ರಕಟಿಸಿ ಹಲವರು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಕ್ಸ್ ವೆಲ್ ‘ಬ್ಯಾಟಿಂಗ್ ವೇಳೆ ನಾನು ರಾಹುಲ್ ಕ್ಷಮೆ ಯಾಚಿಸಿದ್ದೇನೆ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Webduniya Kannada
Top