Saturday, 01 Aug, 12.25 pm ವೆಬ್ದುನಿಯಾ

ಇತ್ತೀಚಿನ ಸುದ್ದಿ
ಕೊರೊನಾ ಗೆ ಔಷಧ ಕಂಡು ಹಿಡಿಯಲು ಪೈಪೋಟಿ ನಡೆಸುತ್ತಿರುವ ದೇಶಗಳು ಈಗಾಗಲೇ ಸಂಶೋಧನೆ ಮಾಡಿದ ಲಸಿಕೆ ಎಷ್ಟು ಗೊತ್ತಾ?

ನವದೆಹಲಿ : ಇಡೀ ದೇಶವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ವೈರಸ್ ಗೆ ಔಷಧ ಕಂಡು ಹಿಡಿಯಲು ಜಗತ್ತಿನ ಪ್ರಬಲ ರಾಷ್ಟ್ರಗಳು ಜಿದ್ದಿಗೆ ಬಿದ್ದಿದ್ದಾರೆ.


25 ದೇಶಗಳಲ್ಲಿ ಕೊರೊನಾ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ. ಭಾರತ, ಅಮೇರಿಕಾ, ರಷ್ಯಾ, ಚೀನಾ, ಬ್ರಿಟನ್, ಇಟಲಿ, ಜಪಾನ್ ಸೇರಿ ಪ್ರಬಲ ದೇಶಗಳು ಪೈಪೋಟಿ ನಡೆಸುತ್ತಿವೆ.

ಈಗಾಗಲೇ 125 ಮಾದರಿಯ ಕೊರೊನಾ ಲಸಿಕೆ ಸಂಶೋಧನೆ ಮಾಡಿದ ದೇಶಗಳು ಅದನ್ನು ಮಾನವರ ಮೇಲೆ ಪ್ರಯೋಗ ಶುರುಮಾಡಿವೆ ಎನ್ನಲಾಗಿದೆ. ಯಾವ ದೇಶದ ಔಷಧ ಕೊರೊನಾ ಹೆಮ್ಮಾರಿಯ ಅಂತ್ಯ ಮಾಡಿ ಜಗತ್ತನ್ನು ರಕ್ಷಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Webduniya Kannada
Top