Dailyhunt
ಕೊರೋನಾ ನಡುವೆಯೂ ಮಿಲನಾ ಬರ್ತ್ ಡೇ ಆಚರಿಸಿದ ಡಾರ್ಲಿಂಗ್ ಕೃಷ್ಣ

ಕೊರೋನಾ ನಡುವೆಯೂ ಮಿಲನಾ ಬರ್ತ್ ಡೇ ಆಚರಿಸಿದ ಡಾರ್ಲಿಂಗ್ ಕೃಷ್ಣ

ಬೆಂಗಳೂರು: ಕೊರೋನಾ ನಡುವೆಯೂ ನಟ ಡಾರ್ಲಿಂಗ್ ಕೃಷ್ಣ ತಮ್ಮ ಪತ್ನಿ, ನಟಿ ಮಿಲನಾ ನಾಗರಾಜ್ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾರೆ.



ಇತ್ತೀಚೆಗಷ್ಟೇ ಇಬ್ಬರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಸದ್ಯಕ್ಕೆ ಈ ನವ ಜೋಡಿ ಹೋಂ ಕ್ವಾರಂಟೈನ್ ನಲ್ಲಿದೆ. ಸದ್ಯಕ್ಕೆ ಇಬ್ಬರ ಆರೋಗ್ಯ ಸ್ಥಿತಿಯೂ ಚೇತರಿಸಿಕೊಂಡಿದೆ.

ಹೀಗಾಗಿ ನಿನ್ನೆ ಮಿಲನಾ ಬರ್ತ್ ಡೇಯನ್ನು ಪೋಷಕರೊಂದಿಗೆ ಮನೆಯಲ್ಲಿಯೇ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ. ನಾವಿಬ್ಬರೂ ಈಗ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದೇವೆ ಎಂದು ಮಿಲನಾ ಹೇಳಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada