ದೂರದ ಊರಿನಿಂದ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಬಂದಿದ್ದ ಆ ಯುವಕ, ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿ ಹೊಟ್ಟೆ ಹಸಿದಾಗ ಊಟ ಮಾಡಲು ಕುಳಿತಿದ್ದ. ಸರಿ ಅದೇ ಸಮಯಕ್ಕೆ ಯಜಮಾನ (ಓನರ್) ತನ್ನತ್ತ ಬರುವುದನ್ನು ಕಂಡು, ಆ ಹುಡುಗ ಒಮ್ಮೆಲೇ ಗಾಬರಿಯಾಗಿ ತನ್ನ ಬಸ್ಸಾಪೆಟ್ಟಿಗೆಯನ್ನು ಬಚ್ಚಿಡಲು ಯತ್ನಿಸಿದ. ಯಜಮಾನ ಬಂದು "ಏನು ತಿನ್ನುತ್ತಿದ್ದೀಯಾ, ತೋರಿಸು?" ಎಂದು ಕೇಳಿ ತಟ್ಟೆ ತೆಗೆಸಿದಾಗ ಅಲ್ಲಿದ್ದದ್ದು ಕೇವಲ ಒಂದು ಒಣ ರೊಟ್ಟಿ ಮತ್ತು ಹಸಿ ಈರುಳ್ಳಿ ಮಾತ್ರ!
ಆ ಯುವಕ ತನ್ನ ಊಟವನ್ನು ಬಚ್ಚಿಟ್ಟಿದ್ದು ಯಜಮಾನನಿಗೆ ಹೆದರಿಯಲ್ಲ, ಬದಲಿಗೆ ತನ್ನ ಬಡತನ, ತನ್ನ ಅಸಹಾಯಕತೆ ಇತರರ ಮುಂದೆ ಪ್ರದರ್ಶನವಾಗಬಾರದು ಎಂಬ ಸಂಕೋಚದಿಂದ! ಸಂಕೋಚದ ಮುದ್ದೆಯಾಗಿದ್ದ ಈ ಯುವಕನ ವಿಡಿಯೋ ನೋಡಿ ನೆಟ್ಟಿಗರೂ ಭಾವುಕರಾಗಿದ್ದಾರೆ. ತನ್ನ ಹಸಿವನ್ನು ಬಚ್ಚಿಟ್ಟು, ಕುಟುಂಬದ ಹಸಿವನ್ನು ನೀಗಿಸಲು ಹಗಲಿರುಳು ಶ್ರಮಿಸುವ ಪ್ರತಿಯೊಬ್ಬ ದುಡಿಯುವ ಕೈಗಳಿಗೂ, ಆ ಮೌನ ಹೋರಾಟಗಾರರಿಗೂ ನಮನಗಳು. ಗಂಡಸಿನ ಬದುಕು ಸುಲಭವಲ್ಲ, ಆದರೆ ಆ ಅಸಹಾಯಕತೆಯ ನಡುವೆಯೂ ಸಾಗುವ ಅವನ ಸ್ವಾಭಿಮಾನದ ಪಯಣ ನಿಜಕ್ಕೂ ಗೌರವಾರ್ಹ.
pic.twitter.com/0WaECpVzwO - ʀᴜᴅʜʀᴀ ʏᴀᴅᴀᴠ???????? (@Rudhrayadav001)
