Thursday, 19 Nov, 9.50 am ವೆಬ್ದುನಿಯಾ

ಸ್ಯಾಂಡಲ್ ವುಡ್
ಲಾಕ್ ಡೌನ್ ಬಳಿಕ ಥಿಯೇಟರ್ ಗೆ ಮೊದಲ ಸಿನಿಮಾ: ಆಕ್ಟ್ 1978 ನಾಳೆಯಿಂದ

ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದರೂ ಹೊಸ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ನಾಳೆಯಿಂದ ಹೊಸ ಸಿನಿಮಾಗಳ ರಿಲೀಸ್ ಶುರುವಾಗಲಿದ್ದು, ಗಾಂಧಿನಗರ ಮತ್ತೆ ಕಲರವ ಮಾಡಲಿದೆ.

ನಾಳೆ ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಕ್ಟ್ 1978’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಹಿಟ್ ಆಗಿದ್ದು, ಸಿನಿಮಾ ಕೂಡಾ ಒಳ್ಳೆಯ ಪ್ರದರ್ಶನ ಕಾಣುವ ವಿಶ್ವಾಸವಿದೆ. ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡುವ ಹೆಣ್ಣಿನ ಕತೆ ಸಿನಿಮಾದಲ್ಲಿದೆ. ಅಂತೂ ಲಾಕ್ ಡೌನ್ ಬಳಿಕ ಥಿಯೇಟ್ ನಲ್ಲಿ ವೀಕ್ಷಿಸಬಹುದಾದ ಅತ್ಯುತ್ತಮ ಸಿನಿಮಾ ಇದಾಗಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Webduniya Kannada
Top