Tuesday, 30 Apr, 7.24 am ವೆಬ್ದುನಿಯಾ

ಇತ್ತೀಚಿನ ಸುದ್ದಿ
ಮಾರಿ ಹಬ್ಬದಲ್ಲಿನ ಕುಣಿತ ನೋಡಿದಿರಾ?

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಸಂಪರ್ಕದ ಕೊಂಡಿಯಂತಿರುವ ಗಡಿ ಜಿಲ್ಲೆಯಲ್ಲಿ ಮಾರಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಚಾಮರಾಜನಗರ ಜಿಲ್ಲೆಯ ಗಡಿ ಪ್ರದೇಶ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದೀಗ ಮಾರಿ ಹಬ್ಬದ ಸಡಗರ ಕಳೆಗಟ್ಟಿದೆ.
ಕೊಳ್ಳೆಗಾಲ ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮಾರಿಹಬ್ಬದ ಪ್ರಯುಕ್ತ ನಡೆದ ಮಾದಪ್ಪನ ಭಕ್ತರ ಒನಕೆ ನೃತ್ಯ ಗಮನ ಸೆಳೆಯಿತು.

ನೂರಾರು ಭಕ್ತರು ಒನಕೆ ಹಿಡಿದು, ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಹರಕೆ ಹೊತ್ತ ಭಕ್ತರು ಒನಕೆ ನೃತ್ಯ ಮಾಡುವ ಮೂಲಕ ಮಾರಿಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Webduniya Kannada
Top