Dailyhunt Logo
  • Light mode
    Follow system
    Dark mode
    • Play Story
    • App Story
ನಂಜೊತೆ ಬನ್ನಿ ಎಂದು ಮಹಿಳೆಯನ್ನು ಕರೆದೊಯ್ದ ಬೀದಿ ನಾಯಿ: ಕೊನೆಗೆ ತೋರಿಸಿದ್ದು ಏನು, ನಿಜಕ್ಕೂ ಅಚ್ಚರಿ Video

ನಂಜೊತೆ ಬನ್ನಿ ಎಂದು ಮಹಿಳೆಯನ್ನು ಕರೆದೊಯ್ದ ಬೀದಿ ನಾಯಿ: ಕೊನೆಗೆ ತೋರಿಸಿದ್ದು ಏನು, ನಿಜಕ್ಕೂ ಅಚ್ಚರಿ Video

ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯಕ್ಕೆ ಯಾವುದೇ ಭಾಷೆ ಅಥವಾ ಮಾತುಗಳ ಅಗತ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ, ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಗೆದ್ದಿದೆ. ಬೀದಿ ನಾಯಿಯೊಂದು ಮಹಿಳೆಯೊಬ್ಬರನ್ನು ಅತ್ಯಂತ ಹೆಮ್ಮೆಯಿಂದ ಹಾಗೂ ನಂಬಿಕೆಯಿಂದ ತನ್ನ ಪುಟ್ಟ ಮರಿಗಳ ಬಳಿ ಕರೆದೊಯ್ದ ದೃಶ್ಯ ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆ ಮಾಡುವಂತಿದೆ.
ಮಹಿಳೆ ರಸ್ತೆಯಲ್ಲಿ ಸಾಗುತ್ತಿದ್ದಾಗ, ಕರುಣಾಜನಕವಾಗಿ ನೋಡಿದ ಬೀದಿ ನಾಯಿಯೊಂದು ಆಕೆಯ ಮುಂದೆ ಬಂದು ಬಾಲ ಅಲ್ಲಾಡಿಸುತ್ತಾ ಮುಂದೆ ಹೆಜ್ಜೆ ಹಾಕಲು ತೊಡಗಿದೆ. "ಬಾ, ನನ್ನ ಪುಟ್ಟ ಕಂದಮ್ಮಗಳನ್ನು ನಿನಗೆ ಪರಿಚಯಿಸುತ್ತೇನೆ" ಎಂಬಂತೆ ಅದು ಪದೇ ಪದೇ ಹಿಂತಿರುಗಿ ನೋಡುತ್ತಾ ಮಹಿಳೆಗೆ ದಾರಿ ತೋರಿಸಿದೆ.

ಆಕೆಯೂ ಕೂಡ ಪ್ರೀತಿಯಿಂದ ನಾಯಿಯನ್ನು ಹಿಂಬಾಲಿಸಿದಾಗ, ರಸ್ತೆಬದಿಯ ಸುರಕ್ಷಿತ ಜಾಗದಲ್ಲಿ ಅಡಗಿಸಿಟ್ಟಿದ್ದ ತನ್ನ ಪುಟ್ಟ ಮರಿಗಳ ಬಳಿಗೆ ಕರೆದೊಯ್ದಿದೆ. ಮಹಿಳೆಯನ್ನು ಕಂಡ ಮರಿಗಳು ಆಕೆಯ ಹತ್ತಿರ ಸುಳಿದಾಡತೊಡಗಿದರೆ, ತಾಯಿ ನಾಯಿ ತನ್ನ ಮರಿಗಳನ್ನು ಆಕೆಗೆ ತೋರಿಸಿ ಹೆಮ್ಮೆಯಿಂದ ನಿಂತುಕೊಂಡಿದೆ.

ಬೀದಿ ನಾಯಿಗಳು ಸಾಮಾನ್ಯವಾಗಿ ತಮ್ಮ ಮರಿಗಳನ್ನು ರಕ್ಷಿಸಿಕೊಳ್ಳಲು ಅಪರಿಚಿತರಿಂದ ದೂರವಿಡುತ್ತವೆ ಅಥವಾ ದಾಳಿ ಮಾಡಲು ಮುಂದಾಗುತ್ತವೆ. ಆದರೆ, ಈ ತಾಯಿ ನಾಯಿ ಆ ಮಹಿಳೆಯಲ್ಲಿದ್ದ ಕರುಣೆ ಮತ್ತು ಪ್ರೀತಿಯನ್ನು ಗುರುತಿಸಿ ಸಂಪೂರ್ಣವಾಗಿ ನಂಬಿತ್ತು. ತಾಯ್ತನದ ವಾತ್ಸಲ್ಯ, ನಂಬಿಕೆ ಹಾಗೂ ಕೃತಜ್ಞತೆಯ ಈ ಅಪರೂಪದ ಕ್ಷಣವು ಪ್ರಾಣಿಗಳಿಗೂ ಮಾನವನ ಹೃದಯದ ಭಾಷೆ ಅರ್ಥವಾಗುತ್ತದೆ ಎಂಬುದನ್ನು ನಿರೂಪಿಸಿದೆ.

pic.twitter.com/ehEPkOsvVL - ಸನಾತನ (सनातन) (@sanatan_kannada)

Dailyhunt
Disclaimer: This content has not been generated, created or edited by Dailyhunt. Publisher: Webduniya Kannada