Photo Credit: X
ಪುಣೆ: ನನ್ನ ಮಗಳು ಮಾಧ್ಯಮಗಳ ಮುಂದೆ ಮಿಡಲ್ ಫಿಂಗರ್ ತೋರಿಸಿ ಅಸಭ್ಯ ವರ್ತನೆ ತೋರಿಲ್ಲ. ಅವಳ ಕೈ ಬೆರಳಿಗೆ ಗಾಯವಾಗಿತ್ತು ಎಂದು ಕೇತನ್ ಅಗರ್ವಾಲ್ ಹತ್ಯೆ ಆರೋಪಿ ಸಿಯಾ ಗೋಯಲ್ ತಂದೆ ಪ್ರವೀಣ್ ಗೋಯಲ್ ಸಮರ್ಥಿಸಿಕೊಂಡಿದ್ದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.ಮೊನ್ನೆಯಷ್ಟೇ ಸಿಯಾಳನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಆಕೆಯ ಮನೆಗೆ ಕರೆದೊಯ್ಯಲಾಗಿತ್ತು. ವಾಪಸ್ ಪೊಲೀಸ್ ವಾಹನ ಏರುವ ಮುನ್ನ ಸಿಯಾ ಮಾಧ್ಯಮಗಳ ಕ್ಯಾಮರಾ ಕಡೆಗೆ ಮಿಡಲ್ ಫಿಂಗರ್ ತೋರಿಸಿ ಅಸಭ್ಯ ವರ್ತನೆ ತೋರಿದ್ದಳು.
ಆದರೆ ಇದೀಗ ಆಕೆಯ ತಂದೆ ಪ್ರವೀಣ್ ಗೋಯಲ್ ಮಗಳನ್ನು ಸಮರ್ಥಿಸಿಕೊಂಡಿದ್ದು 'ಅದು ಅಸಭ್ಯ ಸಂಜ್ಞೆಯಾಗಿರಲಿಲ್ಲ. ಅವಳಿಗೆ ಕೈ ಗಾಯವಾಗಿದೆ. ಹೀಗಾಗಿ ಆ ರೀತಿ ಹಿಡಿದುಕೊಂಡಿದ್ದಳು' ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರವೀಣ್ ಗೋಯಲ್ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಹೀಗೆ ಮಗಳನ್ನು ಸಮರ್ಥಿಸಿಕೊಂಡೇ ಅವಳು ಈ ಮಟ್ಟಿಗೆ ಬಂದಿದ್ದಾಳೆ. ಅಮಾಯಕಿ ಅಮಾಯಕಿ ಎನ್ನುತ್ತಲೇ ತನ್ನ ಭಾವೀ ಪತಿಯ ಜೀವ ತೆಗೆದಿದ್ದಾಳೆ. ಮರ್ಡರ್ ಮಾಡಿದ ಮೇಲೂ ಮಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ ಇದೇ ಕಾರಣಕ್ಕೆ ಅವಳಲ್ಲಿ ಸ್ವಲ್ಪವೂ ಪಶ್ಚಾತ್ತಾಪ ಕಂಡುಬರುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

