Wednesday, 16 Sep, 8.59 pm ವೆಬ್ದುನಿಯಾ

ಸ್ಯಾಂಡಲ್ ವುಡ್
ನಟ ಸುಶಾಂತ್ ಸಿಂಗ್ ಶವದ ಹತ್ತಿರ ರಿಯಾ ಚಕ್ರವರ್ತಿ ಹೋಗಿದ್ದು ಏಕೆ?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ನಿತ್ಯವೂ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಒಳಗಾಗುತ್ತಿದೆ.


ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಶವ ಪರೀಕ್ಷೆ ಮಾಡುವ ಸ್ಥಳಕ್ಕೆ ಪ್ರವೇಶಿಸಿದ ಬಗ್ಗೆ ಮಹಾರಾಷ್ಟ್ರ ಎಸ್‌ಎಚ್‌ಆರ್‌ಸಿ ಮುಂಬೈ ಪೊಲೀಸ್ ಮತ್ತು ಕೂಪರ್ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿದೆ.

ರಿಯಾ ಚಕ್ರವರ್ತಿ ಶವ ಪರೀಕ್ಷೆ ಸ್ಥಳದ ಹತ್ತಿರ ಪ್ರವೇಶಿಸಿದ್ದರ ಕುರಿತು ವ್ಯಾಪಕ ಆರೋಪಗಳು ಕೇಳಿಬಂದಿದ್ದವು.

ಈ ಬಗ್ಗೆ ಮುಂಬೈ ಪೊಲೀಸ್ ಮತ್ತು ಕೂಪರ್ ಆಸ್ಪತ್ರೆ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ರಿಯಾ ಚಕ್ರವರ್ತಿಗೆ ಶವಾಗಾರದ ಹತ್ತಿರ ಹೋಗಿ 45 ನಿಮಿಷಗಳ ಕಾಲ ಇರಲು ಯಾರು ಅನುಮತಿ ನೀಡಿದ್ದರು? ಎಂದು ದಿವಂಗತ ನಟನ ಕುಟುಂಬದವರು ಈ ಹಿಂದೆ ಆರೋಪಿಸಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Webduniya Kannada
Top