Dailyhunt
NCB ಅಧಿಕಾರಿಗಳಿಂದ ನಟ ಸುಶಾಂತ ಸಿಂಗ್ ಸಹೋದರಿಯರ ವಿಚಾರಣೆ?

NCB ಅಧಿಕಾರಿಗಳಿಂದ ನಟ ಸುಶಾಂತ ಸಿಂಗ್ ಸಹೋದರಿಯರ ವಿಚಾರಣೆ?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ, ಸಿಬಿಐ, ಇಡಿ ತನಿಖೆ ಕೈಗೊಂಡಿವೆ.



ಈ ನಡುವೆ ಎನ್‌ಸಿಬಿ ಅಧಿಕಾರಿಗಳು ದಿವಂಗತ ನಟ ಸುಶಾಂತ್ ರ ಸಹೋದರಿ ಮತ್ತು ಸೋದರ ಮಾವರನ್ನು ಕರೆದು ತಮ್ಮ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆ ಇದೆ.

ಸುಶಾಂತ್ ಅವರ ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿ ಮತ್ತು ವ್ಯವಸ್ಥಾಪಕ ಜಯ ಸಹಾ ಅವರನ್ನುಇವತ್ತು ವಾಪಸ್ ಕಳುಹಿಸಲಾಗಿದೆ.

ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್ ಮತ್ತು ಇತರರನ್ನು ಬಂಧಿಸಿದ್ದರೆ, ಸಿಬಿಐ ಮತ್ತು ಇಡಿ ಸಹ ದಿವಂಗತ ನಟನ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada