Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಧಾನಿ ಮೋದಿ ವಿಡಿಯೋವನ್ನೇ ಬ್ಲಾಕ್ ಮಾಡ್ತೀರಾ: ಮೆಟಾ ವಿರುದ್ಧ ಸೈಬರ್ ಪೊಲೀಸರ ಖಡಕ್ ಕ್ರಮ

ಪ್ರಧಾನಿ ಮೋದಿ ವಿಡಿಯೋವನ್ನೇ ಬ್ಲಾಕ್ ಮಾಡ್ತೀರಾ: ಮೆಟಾ ವಿರುದ್ಧ ಸೈಬರ್ ಪೊಲೀಸರ ಖಡಕ್ ಕ್ರಮ

Photo Credit: X

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವಜನತೆಯನ್ನು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಂಚಿಕೊಂಡಿದ್ದ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಬ್ಲಾಕ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಮ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮೆಟಾ ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿದೆ.

ನೀಟ್ ಪರೀಕ್ಷೆ ಅಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಮತ್ತು ಸರ್ಕಾರದ ಕಠಿಣ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದ ವಿಶೇಷ ವೀಡಿಯೊ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಬ್ಲಾಕ್ ಮಾಡಲಾಗಿತ್ತು. ಭಾರತದಲ್ಲಿ ಈ ವೀಡಿಯೊ ನೋಡಲು ಯತ್ನಿಸಿದ ಬಳಕೆದಾರರಿಗೆ "ಕಾನೂನು ಮನವಿಯ ಮೇರೆಗೆ ಲಭ್ಯವಿಲ್ಲ" ಎಂಬ ಸಂದೇಶ ಕಾಣಿಸುತ್ತಿತ್ತು.

ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮೆಟಾ ಸಂಸ್ಥೆಯು ತಾಂತ್ರಿಕ ದೋಷದಿಂದ ಈ ರೀತಿ ಸಂಭವಿಸಿದೆ ಎಂದು ಕ್ಷಮೆ ಯಾಚಿಸಿತು. ಆಟೋಮೇಟೆಡ್ ಫಿಲ್ಟರ್‌ಗಳ ತಪ್ಪಿನಿಂದಾಗಿ ವೀಡಿಯೊ ತೆಗೆದುಹಾಕಲ್ಪಟ್ಟಿತ್ತು, ಅದನ್ನು ಪುನಃ ರಿಸ್ಟೋರ್ ಮಾಡಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಮೆಟಾ ನೀಡಿದ "ತಾಂತ್ರಿಕ ದೋಷ" ಎಂಬ ಸಮಜಾಯಿಷಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ. ದೇಶದ ಪ್ರಧಾನಮಂತ್ರಿಯವರ ಅಧಿಕೃತ ವೀಡಿಯೊವನ್ನೇ ಬ್ಲಾಕ್ ಮಾಡುವುದರ ಹಿಂದಿನ ಗಂಭೀರತೆಯನ್ನು ಪ್ರಶ್ನಿಸಿರುವ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮೆಟಾ ಜಾಗತಿಕ ಸಾರ್ವಜನಿಕ ನೀತಿ ಮುಖ್ಯಸ್ಥರಿಗೆ ತುರ್ತು ಸಮನ್ಸ್ ನೀಡಿದೆ.

ಸಂಸ್ಥೆಯ ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಪ್ರಮುಖ ಮುಖಂಡರ ಅಕೌಂಟ್‌ಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಹಿರಿಯ ಅಧಿಕಾರಿಗಳ ಪರಿಶೀಲನೆ ಕಡ್ಡಾಯಗೊಳಿಸುವಂತೆ ಮೆಟಾಗೆ ಸ್ಪಷ್ಟ ಸೂಚನೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada