Photo Credit X
ಬೆಂಗಳೂರು: ನಿಮ್ಮ ವಿರುದ್ಧ ಯಾವುದೇ ಕೆಲಸವನ್ನು ಮಾಡುವುದಿಲ್ಲ. ರಾಜ್ಯದ ಹಿತಕ್ಕಾಗಿ ನಾವಿದ್ದು, ದಯವಿಟ್ಟು ಬಂದ್ ಅನ್ನು ಕೈಬಿಡಬೇಕೆಂದು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಹೋರಾಟ ಮಾಡ್ತಿವೆ.
ರಾಜ್ಯದ ಹಿತ ರಕ್ಷಣೆಗೆ ನಾವಿದ್ದೇವೆ, ನೀವೆಲ್ಲ ಸೇರಿ ನಮಗೆ ಅಧಿಕಾರ ಕೊಟ್ಟಿದ್ದೀರಿ, ನಿಮ್ಮ ವಿರುದ್ಧ ಯಾವುದೇ ಕಾರಣಕ್ಕೂ ಕೆಲಸ ಮಾಡಲ್ಲ. ದಯವಿಟ್ಟು ಬಂದ್ ವಿಚಾರ ಕೈಬಿಡಬೇಕು ಎಂದು ಕನ್ನಡಪರ ಹೋರಾಟಗಾರರಿಗೆ ಮನವಿ ಮಾಡಿದ್ದಾರೆ.
ನಾವು ನಿಮ್ಮ ಪರವಿದ್ದು, ಕರ್ನಾಟಕ ಬಂದ್ ಮಾಡ್ರೋದ್ರಿಂದ ಯಾವಿದೇ ಪರಿಹಾರ ಸಿಗಲ್ಲ. ಕಾನೂನು ವ್ಯವಸ್ಥೆ ಬೇರೆ ಇದೆ, ಕೋರ್ಟ್ ಆದೇಶ ಬೇರೆ ಇದೆ.
ಬಂದ್ ಮಾಡಿದ್ರೆ ಜನರಿಗೆ ಎಷ್ಟು ತೊಂದರೆ ಆಗುತ್ತೆ ಅನ್ನೋದು ನಿಮಗೂ ಗೊತ್ತಿದೆ, ನೀವೂ ಆಲೋಚನೆ ಮಾಡಬೇಕು. ಆದ್ದರಿಂದ ಬಂದ್ ಮಾಡಬೇಕೆಂಬ ನಿಮ್ಮ ತೀರ್ಮಾನ ದಯವಿಟ್ಟು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

