Photo Credit: X
ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೂ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರನ್ನು ಕರ್ತವ್ಯಕ್ಕೆ ವಾಪಸ್ ನೇಮಕ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಶ್ಲೀಲವಾಗಿ ನಡೆದುಕೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅವರನ್ನು ಅಮಾನತು ಮಾಡಿ ಇಲಾಖೆ ತನಿಖೆಗೆ ಮುಂದಾಗಿತ್ತು.
ಇದೀಗ ತನಿಖೆ ಪ್ರಗತಿಯಲ್ಲಿದೆ. ವಿಡಿಯೋ ಎಐ ಸೃಷ್ಟಿಯಲ್ಲ ನಿಜವಾದ ವಿಡಿಯೋ ಎಂದು ಇತ್ತೀಚೆಗೆ ವರದಿಯೂ ಬಂದಿತ್ತು. ಆದರೆ ಇದರ ನಡುವೆಯೇ ಅವರನ್ನು ವಾಪಸ್ ಕರ್ತವ್ಯಕ್ಕೆ ಸೇರಿಸಿಕೊಂಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ.
ಇದೀಗ ತನಿಖೆ ಪ್ರಗತಿಯಲ್ಲಿದೆ. ವಿಡಿಯೋ ಎಐ ಸೃಷ್ಟಿಯಲ್ಲ ನಿಜವಾದ ವಿಡಿಯೋ ಎಂದು ಇತ್ತೀಚೆಗೆ ವರದಿಯೂ ಬಂದಿತ್ತು. ಆದರೆ ಇದರ ನಡುವೆಯೇ ಅವರನ್ನು ವಾಪಸ್ ಕರ್ತವ್ಯಕ್ಕೆ ಸೇರಿಸಿಕೊಂಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ.
ಕೇವಲ ಅಮಾನತು ಆದೇಶ ಹಿಂಪಡೆದಿರುವುದು ಮಾತ್ರವಲ್ಲ, ಅವರಿಗಾಗಿ ಹೊಸ ಹುದ್ದೆ ಸೃಷ್ಟಿ ಮಾಡಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ. ಮೊನ್ನೆಯಷ್ಟೇ ಏಪ್ರಿಲ್ 27 ರಂದು ಗೃಹಸಚಿವ ಡಾ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ರಾಮಚಂದ್ರ ರಾವ್ ನನ್ನ ಮೇಲೆ ಯಾವುದೇ ಕೇಸ್ ಇಲ್ಲ, ವಾಪಸ್ ಹುದ್ದೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮತ್ತು ಟೀಕೆಗೆ ಗ್ರಾಸವಾಗಿದೆ.