Dailyhunt Logo
  • Light mode
    Follow system
    Dark mode
    • Play Story
    • App Story
ರಸ್ತೆ ಬದಿ ಕಾರು ಡೋರ್ ತೆಗೆಯುವಾಗ ಎಚ್ಚರವಿರಬೇಕೆಂಬುದು ಇದೇ ಕಾರಣಕ್ಕೆ: ಓರ್ವ ವ್ಯಕ್ತಿಯ ಜೀವವೇ ಹೋಯ್ತು Video

ರಸ್ತೆ ಬದಿ ಕಾರು ಡೋರ್ ತೆಗೆಯುವಾಗ ಎಚ್ಚರವಿರಬೇಕೆಂಬುದು ಇದೇ ಕಾರಣಕ್ಕೆ: ಓರ್ವ ವ್ಯಕ್ತಿಯ ಜೀವವೇ ಹೋಯ್ತು Video

ಸ್ತೆ ಬದಿ ಕಾರು ನಿಲ್ಲಿಸಿ ಡೋರ್ ತೆಗೆಯುವ ಮುನ್ನ ಹಿಂದಿನಿಂದ ವಾಹನ ಬರುತ್ತಿದೆಯಾ ಎಂದು ಗಮನಿಸಬೇಕು ಎಂಬುದು ಇದೇ ಕಾರಣಕ್ಕೆ. ಮಹಿಳೆಯೊಬ್ಬರು ಮಾಡಿದ ಈ ತಪ್ಪಿಗೆ ಓರ್ವ ವ್ಯಕ್ತಿಯ ಪ್ರಾಣವೇ ಹೋಗಿದೆ. ಈ ಭಯಾನಕ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ. ಕಾರಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ರಸ್ತೆಯ ಸಂಚಾರವನ್ನು ಗಮನಿಸದೇ ಅಚಾನಕ್ಕಾಗಿ ಕಾರಿನ ಬಾಗಿಲು ತೆರೆದ ಪರಿಣಾಮ, ಹಿಂಬದಿಯಿಂದ ಬಂದ ಮೊಪೆಡ್ ಡಿಕ್ಕಿಯಾಗಿ 56 ವರ್ಷದ ಸವಾರರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಈ ಭೀಕರ ಅಪಘಾತದ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಪಘಾತ ಸಂಭವಿಸಿದ ವೇಳೆ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ದಿಢೀರನೇ ಬಾಗಿಲನ್ನು ತೆರೆದಿದ್ದಾರೆ. ಅದೇ ಸಮಯದಲ್ಲಿ ಅದೇ ಮಾರ್ಗದಲ್ಲಿ ಮೊಪೆಡ್‌ನಲ್ಲಿ ಬರುತ್ತಿದ್ದ 56 ವರ್ಷದ ವ್ಯಕ್ತಿಗೆ ತಕ್ಷಣವೇ ವಾಹನವನ್ನು ತಡೆಯಲು ಸಾಧ್ಯವಾಗದೆ ಕಾರಿನ ಬಾಗಿಲಿಗೆ ಭರದಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಚಾಲಕ ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಬಿದ್ದ ರಭಸಕ್ಕೆ ವ್ಯಕ್ತಿಯ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ನಾಲ್ಕು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕಾರಿನ ಬಾಗಿಲು ತೆರೆದ ತಕ್ಷಣವೇ ಮೊಪೆಡ್ ಡಿಕ್ಕಿಯಾಗಿ ಸವಾರ ರಸ್ತೆಗೆ ಬೀಳುವ ಭೀಕರ ದೃಶ್ಯ ವಿಡಿಯೋದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಕೈಗೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

pic.twitter.com/xlm3clHL2n - Hate Detector ???? (@HateDetectors)

Dailyhunt
Disclaimer: This content has not been generated, created or edited by Dailyhunt. Publisher: Webduniya Kannada