Photo Credit: Social media
ಬೆಂಗಳೂರು: ಅಂದು ರಾಯರ ಫೋಟೋ ನೀಡಿದಾಗ ತಿರಸ್ಕರಿಸಿದರು. ಇಂದು ರಾಯರ ದಿನ ಗುರುವಾರವೇ ಅಧಿಕಾರ ಹೋಗ್ತಿದೆ ಎಂದು ಸಿದ್ದರಾಮಯ್ಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಭಾರೀ ಚರ್ಚೆ ನಡೆಸುತ್ತಿದ್ದಾರೆ.ಕೆಲವು ಸಮಯದ ಹಿಂದೆ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಯೊಬ್ಬರು ರಾಯರ ಫೋಟೋವನ್ನು ಉಡುಗೊರೆಯಾಗಿ ನೀಡಲು ಬಂದಿದ್ದರು.
ಕಾರಿನಲ್ಲೇ ಕುಳಿತು ಅನೇಕ ಜನರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ ರಾಯರ ಫೋಟೋ ನೀಡಿದಾಗ ತಿರಸ್ಕರಿಸಿ ಆತನಿಗೆ ವಾಪಸ್ ಮಾಡಿದ್ದರು.
ಈ ಘಟನೆ ಬಗ್ಗೆ ರಾಯರ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಜಗ್ಗೇಶ್ ಕೂಡಾ ರಾಯರ ಕಡೆಗಣಿಸಿದರೆ ಯಾರೂ ಉದ್ಧಾರವಾಗಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಈ ಘಟನೆ ಬಗ್ಗೆ ರಾಯರ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಜಗ್ಗೇಶ್ ಕೂಡಾ ರಾಯರ ಕಡೆಗಣಿಸಿದರೆ ಯಾರೂ ಉದ್ಧಾರವಾಗಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಇದೀಗ ಇಂದು ಗುರುವಾರವೇ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಈ ಹಿನ್ನಲೆಯಲ್ಲಿ ನೆಟ್ಟಿಗರು ಅಂದು ರಾಯರ ಫೋಟೋ ತಿರಸ್ಕರಿಸಿದ್ದಕ್ಕೇ ಇಂದು ರಾಯರ ದಿನವೇ ಅಧಿಕಾರ ಕಳೆದುಕೊಳ್ಳುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
pic.twitter.com/MmnazlnHzW