Photo Credit: Social media
ಬೆಂಗಳೂರು: ಸಿಎಂ ಸ್ಥಾನ ಸಿಗುತ್ತಿದ್ದಂತೇ ಡಿಕೆ ಶಿವಕುಮಾರ್ ಗೆ ನೊಣವಿನಕೆರೆ ಅಜ್ಜಯ್ಯ ಶಾಕಿಂಗ್ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ.ಡಿಕೆ ಶಿವಕುಮಾರ್ ಇಷ್ಟು ದಿನ ಸಿಎಂ ಆಗಬೇಕು ಎಂದು ಮಹದಾಸೆ ಇಟ್ಟುಕೊಂಡಿದ್ದರು. ಅನೇಕ ಟೆಂಪಲ್ ರನ್ ಮಾಡಿದ್ದೂ ಇದೆ.
ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು ಕೂಡಾ. ಇದೀಗ ಕೊನೆಗೆ ಅವರ ಆಸೆ ಈಡೇರುತ್ತಿದೆ. ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಅವರು ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಹಣ್ಣು,ಕಾಯಿ ನೀಡಿ ಅಜ್ಜಯ್ಯ ಆಶೀರ್ವಾದ ಮಾಡಿದ್ದು ಜೊತೆಗೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದರ ಬೆನ್ನಲ್ಲೇ ಅವರು ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಹಣ್ಣು,ಕಾಯಿ ನೀಡಿ ಅಜ್ಜಯ್ಯ ಆಶೀರ್ವಾದ ಮಾಡಿದ್ದು ಜೊತೆಗೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಿಎಂ ಪದಗ್ರಹಣ ಆಗುವವರೆಗೂ ಯಾವುದೇ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಮಾತು ಆಡಿದರೆ ಹೋಯ್ತು ಎಂದು ಎಚ್ಚರಿಸಿದ್ದಾರೆ. ಹೀಗಾಗಿ ತಮಗೆ ಸಿಎಂ ಪಟ್ಟ ಸಿಕ್ಕಿರುವುದರ ಬಗ್ಗೆ ಡಿಕೆ ಶಿವಕುಮಾರ್ ಇದುವರೆಗೆ ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.