Dailyhunt
ಸ್ಟಾರ್ ನಟನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನುಮಾನ

ಸ್ಟಾರ್ ನಟನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನುಮಾನ

ಬೆಂಗಳೂರು: ತಮ್ಮ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಲ್ಲೆ ಆರೋಪ ಮಾಡಿರುವುದರ ಹಿಂದೆ ಒಬ್ಬ ಸ್ಟಾರ್ ನಟನ ಕೈವಾಡವಿರಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪಿಸಿದ್ದಾರೆ.



ಮಾಧ್ಯಮಗಳ ಮುಂದೆ ತಮ್ಮ ಅನುಮಾನ ಹೊರಹಾಕಿರುವ ದರ್ಶನ್, ‘ಇಂದ್ರಜಿತ್ ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ ಎಂದರೆ ಅವರ ಹಿಂದೆ ಯಾರೋ ಎಕ್ಸ್ ವೈ ಝೆಡ್.. ಇರಲೇಬೇಕು. ಯಾರೋ ಸ್ಟಾರ್ ನಟರೇ ಅವರಿಗೆ ಕುಮ್ಮಕ್ಕು ನೀಡುತ್ತಿರಬೇಕು’ ಎಂದಿದ್ದಾರೆ.

ವಂಚನೆ ಪ್ರಕರಣದ ಬಳಿಕ ಇದೀಗ ಹಲ್ಲೆ ಆರೋಪ ಮಾಡಿದ್ದು, ತಮ್ಮ ಮೇಲೆ ನಡೆದಿರುವ ವ್ಯವಸ್ಥಿತ ಸಂಚು ಎಂದು ದರ್ಶನ್ ಆರೋಪಿಸಿದ್ದಾರೆ. ಹೀಗಾಗಿ ಆ ಸ್ಟಾರ್ ನಟ ಯಾರು ಎಂಬ ಅನುಮಾನ ಈಗ ಎಲ್ಲರ ತಲೆಯಲ್ಲಿ ಶುರುವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada