Dailyhunt Logo
  • Light mode
    Follow system
    Dark mode
    • Play Story
    • App Story
Toxic ಒಂದು ಅಸಾಮಾನ್ಯ, ಶ್ಲಾಘನೀಯ, ಯಶ್ ಪ್ರಯತ್ನವನ್ನು ಕೊಂಡಾಡಿದ ಕಿಚ್ಚ ಸುದೀಪ್‌ ಮೆಚ್ಚುಗೆ

Toxic ಒಂದು ಅಸಾಮಾನ್ಯ, ಶ್ಲಾಘನೀಯ, ಯಶ್ ಪ್ರಯತ್ನವನ್ನು ಕೊಂಡಾಡಿದ ಕಿಚ್ಚ ಸುದೀಪ್‌ ಮೆಚ್ಚುಗೆ

Photo Credit X

ಟಾಕ್ಸಿಕ್ ಸಿನಿಮಾಗೆ ಭಾರೀ ಮಿಶ್ರಪ್ರತಿಕ್ರಿಯೆ ನಡುವೆ ನಟ ಕಿಚ್ಚ ಸುದೀಪ್ ಅವರು ನಟ ಯಶ್ ಅವರ ಪಾತ್ರದ ಆಯ್ಕೆ ಹಾಗೂ ನಟನೆ ಸಂಬಂಧ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. @TheNameIsYash, ಇದನ್ನೊಂದು ಹೇಳಲೇಬೇಕು - ನಿಮ್ಮ ಹಿಂದಿನ ಬೃಹತ್ ವಾಣಿಜ್ಯ ಯಶಸ್ಸಿನ ನಂತರ, ಅದೇ ಹಳೆಯ ಮಾದರಿಯ ಅಥವಾ ನಿರೀಕ್ಷಿತ ಹಾದಿಯನ್ನು ತುಳಿಯುವ ಬದಲು, ನೀವು ನಿಜಕ್ಕೂ ವಿಭಿನ್ನವಾದ ಹಾಗೂ ಹೊಸತನದಿಂದ ಕೂಡಿದ ಪ್ರಯತ್ನವನ್ನು ಮಾಡಿದ್ದೀರಿ.
ಇಂತಹ ಪ್ರಯತ್ನಕ್ಕೆ ವಿಭಿನ್ನ ಮನಸ್ಥಿತಿ, ದೃಢ ನಂಬಿಕೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯದ ಅಗತ್ಯವಿರುತ್ತದೆ.

#Toxic ಒಂದು ಅಸಾಮಾನ್ಯ ಮತ್ತು ಶ್ಲಾಘನೀಯ ಪ್ರಯತ್ನ. ಇದರಲ್ಲಿನ ಹಲವು ಅಂಶಗಳು ನಿಜಕ್ಕೂ ಕುತೂಹಲಕಾರಿ ಆಗಿದ್ದು, ಆಳವಾದ ಚರ್ಚೆ, ಸಂವಾದ ಮತ್ತು ಹೊಸ ವಿಷಯಗಳನ್ನು ಕಲಿಯಲು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

ಸಾಂಪ್ರದಾಯಿಕ ಹಾದಿಯಿಂದ ಹೊರಬಂದು ಪ್ರಯೋಗಶೀಲರಾಗಲು ಮುಂದಾದ ನಿಮಗೆ ಅಭಿನಂದನೆಗಳು.

ನಿಮಗೆ ಶುಭ ಹಾರೈಕೆಗಳು, ನನ್ನ ಸ್ನೇಹಿತರೇ. ❤️????

L&H's

Dailyhunt
Disclaimer: This content has not been generated, created or edited by Dailyhunt. Publisher: Webduniya Kannada