Dailyhunt
VIP ಸಂಸ್ಕೃತಿ ವಿರುದ್ಧ ಸಿಡಿದೆದ್ದ ತೆಲಂಗಾಣ ಜನ: ಮಾಡಿದ್ದೇನು ನೋಡಿ Video

VIP ಸಂಸ್ಕೃತಿ ವಿರುದ್ಧ ಸಿಡಿದೆದ್ದ ತೆಲಂಗಾಣ ಜನ: ಮಾಡಿದ್ದೇನು ನೋಡಿ Video

Photo Credit: X

ಹೈದರಾಬಾದ್: ತೆಲಂಗಾಣದಲ್ಲಿ ಜನ ವಿಐಪಿ ಸಂಸ್ಕೃತಿ ವಿರುದ್ಧ ಸಿಡಿದೆದ್ದಿದ್ದಾರೆ. ಸಿಎಂ ರೇವಂತ್ ರೆಡ್ಡಿಗಾಗಿ ಟ್ರಾಫಿಕ್ ತಡೆ ಹಿಡಿದಿದ್ದಕ್ಕೆ ಹಾರ್ನ್ ಹೊಡೆದು ಪ್ರತಿಭಟನೆ ನಡೆಸಿದ್ದಾರೆ.

ನಮ್ಮ ದೇಶದಲ್ಲಿ ವಿಐಪಿಗಳು ಸಾಗುವಾಗ ಟ್ರಾಫಿಕ್ ತಡೆ ಹಿಡಿಯುವುದು ಸಾಮಾನ್ಯ.
ಆದರೆ ಇದರಿಂದ ಎಷ್ಟೋ ಜನ ತುರ್ತು ಸಂದರ್ಭಗಳಲ್ಲಿ ಮುಂದೆ ಸಾಗಲಾಗದೇ ಸಂಕಷ್ಟ ಅನುಭವಿಸುತ್ತಾರೆ. ವಿಐಪಿ ಸಂಸ್ಕೃತಿ ನಿಲ್ಲಬೇಕು ಎಂದು ಎಷ್ಟೇ ಹೇಳಿದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ.

ಇಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ಕೂಡಾ ಬೆಂಗಳೂರಿನಂತೆ ಮಹಾನಗರಿಯಾಗಿದ್ದು ಸಾಕಷ್ಟು ಜನ ಓಡಾಡುವ ಪ್ರದೇಶವಾಗಿದೆ. ಹೈದರಾಬಾದ್ ನಲ್ಲಿ ಸಂಜೆ ವೇಳೆ ಪ್ರಮುಖ ರಸ್ತೆಯಲ್ಲಿ ಸಿಎಂ ಬೆಂಗಾವಲು ಪಡೆಗಾಗಿ ಟ್ರಾಫಿಕ್ ತಡೆ ಹಿಡಿಯಲಾಗಿತ್ತು.


ಇದು ವಾಹನ ಸವಾರರನ್ನು ಕೆರಳಿಸಿತ್ತು. ಹೀಗಾಗಿ ಸಿಎಂ ಬೆಂಗಾವಲು ಪಡೆ ಹೋಗುವಷ್ಟು ಹೊತ್ತು ಸಾಮೂಹಿಕವಾಗಿ ಎಡೆಬಿಡದೇ ಹಾರನ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ವಿಐಪಿ ಸಂಸ್ಕೃತಿ ವಿರುದ್ಧ ಸಿಡಿದೆದ್ದಿದ್ದಾರೆ.

pic.twitter.com/uuvSaT2SvI - ಭೀಮಾ ತೀರದಲ್ಲಿ.. (@bharatvarsha03)

Dailyhunt
Disclaimer: This content has not been generated, created or edited by Dailyhunt. Publisher: Webduniya Kannada