ಕಳೆದ ವರ್ಷ ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಬಿಡುಗಡೆಗೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಈಗ ಅದೇ ತಂಡ ಭಾಗ -2 ಆರಂಭಿಸಲು ಸಿದ್ಧವಾಗಿದೆ. ಶಿವಾಜಿ ಸುರತ್ಕಲ್ ಸ್ವತಃ ವಿತರಕರಿಂದಲೇ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಈಗ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರ ಸಾರಥ್ಯದಲ್ಲಿ ಮತ್ತು ನಿರ್ಮಾಪಕರಾದ ರೇಖಾ ಕೆ.
ಶಿವಾಜಿಯಾಗಿ ರಮೇಶ್ ಅರವಿಂದ್ ರವರು ಬಣ್ಣ ಹಚ್ಚಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2 ರಲ್ಲೂ ಮುಂದುವರಿಯಲಿದ್ದಾರೆ. ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ.
ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು, ಆದರೆ ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ.
ಚಿತ್ರಮಂದಿರ ಭೇಟಿಯ ಸಂದರ್ಭ ಎದುರಾಗಿದ್ದ ಅನೇಕ ಪ್ರಶ್ಮೆಗಳಿಗೆ, ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ ಈ ಚಿತ್ರದಲ್ಲಿ ನಿರ್ದೇಶಕರು ಉತ್ತರವಿಟ್ಟಿದ್ದಾರೆ. ಗುರುಪ್ರಸಾದ್ M. G. ಛಾಯಾಗ್ರಾಹಕರಾಗಿ ಮುಂದುವರಿಯಲಿದ್ದು, ಉಳಿದಂತೆ ತಾಂತ್ರಿಕ ತಂಡವನ್ನು ಸಧ್ಯದಲ್ಲೇ ಬಹಿರಂಗಗೊಳಿಸಲಿದೆ ಚಿತ್ರತಂಡ.
ಭಾಗ-1 ರ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಹುರುಪಿನಿಂದ ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ. ಪ್ರೇಕ್ಷಕರು ಹಾಗು ಪತ್ರಕರ್ತರ ಸಹಕಾರ ಮತ್ತು ಪ್ರೋತ್ಸಾಹ ಶಿವಾಜಿ ಸುರತ್ಕಲ್ ಭಾಗ-1 ಕ್ಕೆ ನೀಡಿದಂತೆ ಈ ಚಿತ್ರಕ್ಕೂ ನೀಡಬೇಕೆನ್ನುವುದು ಚಿತ್ರತಂಡದ ವಿನಮ್ರ ಕೋರಿಕೆಯಾಗಿದೆ.

