Dailyhunt
"ಗಾಂಧಿ ಮತ್ತು ನೋಟು" ಟ್ರೇಲರ್ ಲಾಂಚ್ ಮಾಡಿದ ಶಿವಣ್ಣ

"ಗಾಂಧಿ ಮತ್ತು ನೋಟು" ಟ್ರೇಲರ್ ಲಾಂಚ್ ಮಾಡಿದ ಶಿವಣ್ಣ

Cinisuddi 4 years ago

ಚಂದನವನದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದಂಥ ಸಾಹಿತಿ , ನಿರ್ದೇಶಕ ಹಾಗೂ ನಟ ವಿ.ನಾಗೇಂದ್ರಪ್ರಸಾದ್ ರವರ ಪುತ್ರಿ ದಿವಿಜಾ ನಾಗೇಂದ್ರಪ್ರಸಾದ್ ವಿಭಿನ್ನ ಕಥಾಹಂದರ ಹೊಂದಿರುವ "ಗಾಂಧಿ ಮತ್ತು ನೋಟು" ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಅನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ದಿವಿಜಾ ನಾಗೇಂದ್ರಪ್ರಸಾದ್ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದು , ಉಳಿದಂತೆ ಲೋಕೇಶ್‌ ಡಿ.ಕೆ, ಮುರುಧ್ಯ, ಪ್ರಜ್ಞಾ ಬ್ರಹ್ಮಾವರ್, ಕೆ.ಬಿ.ರವಿ, ರಂಗಸ್ವಾಮಿ, ನವೀನ್, ವಿಶಾಲ್* ಮುಂತಾದವರು ತಾರಾಬಳಗದಲ್ಲಿದ್ದಾರೆ.
ಭಾವನ ಕಂಬೈನ್ಸ್ ಲಾಂಛನದಲ್ಲಿ ಸುಧಾರಾಣಿ ಹೆಚ್.ಆರ್, ವೀಣಾ ಪದ್ಮನಾಭ, ಮಂಜುನಾಥ್ ಬಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಆಫ್ ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಗಾಂಧಿ ತತ್ವಗಳನ್ನು ಹಾಗೂ ನೋಟನ್ನು ಈಗಿನ ಜನ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಹಳ್ಳಿ ಹುಡುಗಿ(ದಿವಿಜಾ) ಪಾತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕರು. ಚಿಕ್ಕ ವಯಸ್ಸಿನ ಈ ಹುಡುಗಿ ಹೇಳುವ ಮಾತು ಎಲ್ಲಾವರ್ಗದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದೇ ಇದರ ಕಥಾಸಾರಾಂಶ. ಸಾಗರದ ತುಂಬ್ರಿ ಎಂಬ ಸ್ಥಳದಲ್ಲೇ ಹೆಚ್ಚಿನ‌ ಚಿತ್ರೀಕರಣ ನಡೆದಿದೆ. ಪ್ರಸ್ತುತ ಚಿತ್ರ ಡಿ ಐ ನಿಂದ ಸಿಂಗಾರಗೊಳ್ಳುತ್ತಿದೆ.

ಅಕ್ಟೋಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ. ವಿ.ನಾಗೇಂದ್ರಪ್ರಸಾದ್ ಬರೆದಿರುವ ಹಾಡುಗಳಿಗೆ ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನ ಹಾಗೂ ವಿ.ಎಲ್ ಸತೀಶ್ ಅವರ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Cinisuddi