Dailyhunt
ಸ್ಯಾಂಡಲ್ ವುಡ್ ನಲ್ಲಿ 3 ತಾರೆಯರ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ ವುಡ್ ನಲ್ಲಿ 3 ತಾರೆಯರ ಹುಟ್ಟುಹಬ್ಬದ ಸಂಭ್ರಮ

Cinisuddi 5 years ago

ಇಂದು ಕರುನಾಡಿನ ಮೂವರು ಪ್ರಮುಖ ತಾರೆಯರ ಹುಟ್ಟುಹಬ್ಬದ ಸಂಭ್ರಮ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ , ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಶ್ರುತಿ ಅವರಿಗೆ ಇಂದು ಹುಟ್ಟುಹಬ್ಬ. ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ನಟ ಉಪೇಂದ್ರ ಅವರು 53 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಉಪ್ಪಿ ಅಭಿನಯದ ಆರ್. ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ" ಚಿತ್ರದ ಥೀಮ್ ಪೋಸ್ಟರನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಿದ್ದಾರೆ.

ಉಪ್ಪಿ ಅಭಿನಯದ "2021" ಎಂಬ ನೂತನ ಚಿತ್ರ ಕೂಡ ಆರಂಭಗೊಳ್ಳುತ್ತಿದ್ದು , ಮಂಜು ಮಾಂಡವ್ಯ ನಿರ್ದೇಶನ , ಅಣ್ಣಯ್ಯ ಚಂದ್ರು ನಿರ್ಮಾಣದ ಚಿತ್ರ 100 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿದ್ದು , ಇಂದು ಅಧಿಕೃತವಾಗಿ ಘೋಷಣೆಯಾಗಿದೆ.

ಮತ್ತೊಂದು ವಿಶೇಷ ಎಂದರೆ ಉಪ್ಪಿ ಮನೆಗೆ ಸುಮಾರು ನಲವತ್ತು ಲಕ್ಷದ ಬ್ಲಾಕ್ ಕಿಯಾ ಕಾರ್ನಿವಲ್ ಕಾರ್ ಉಪ್ಪಿಯ ಬರ್ತ್ಡೇ ಗಿಫ್ಟ್ ಆಗಿ ಮನೆಗೆ ಬಂದಿದೆ. ಇದೇ ಸಂದರ್ಭದಲ್ಲಿ ನಟ ಉಪೇಂದ್ರ ತಮ್ಮ ನಿರ್ದೇಶನದ ನೂತನ ಚಿತ್ರವನ್ನು ಆರಂಭಿಸಲಿದ್ದಾರಂತೆ.

ಇದು ರಾಕಿಂಗ್ ಸ್ಟಾರ್ ಯಶ್ ಹಾಗೂ ಉಪೇಂದ್ರ ಕಾಂಬಿನೇಷನ್ ಚಿತ್ರ ಎಂಬ ಮಾತು ಕೂಡ ಕೇಳಿಬರುತ್ತಿದೆ. ಉಪೇಂದ್ರ ಅವರ ಇನ್ನೂ ರಾಜಕೀಯದಲ್ಲೂ ತಮ್ಮ ಕ್ರಿಯೇಟಿವಿಟಿ ತೋರಿಸುತ್ತಿದ್ದು , ಉತ್ತಮ ಪ್ರಜಾಕೀಯ ಪಕ್ಷ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು , ಉಪ್ಪಿಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಹಾಗೆಯೇ ಕರುನಾಡಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಕೂಡ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದು , ಈ ಬಾರಿ ಡಾ. ವಿಷ್ಣುವರ್ಧನ್ ಅವರ 70 ನೇ ಜನ್ಮದಿನವು ಬಹಳ ವಿಶೇಷತೆಯಿಂದ ಕೂಡಿದೆ. ಕಾರಣ ಏನೆಂದರೆ ಕಳೆದ ಮೂರು ದಿನಗಳ ಹಿಂದೆ ಅಷ್ಟೇ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಗುದ್ದಲಿ ಪೂಜೆ ಮೈಸೂರಿನಲ್ಲಿ ಸಿ.ಎಂ. ಆನ್ ಲೈನ್ ಮೂಲಕ ಬಿಡುಗಡೆ ಮಾಡಿದ್ದು ವಿಶೇಷವಾಗಿದೆ.

ಮತ್ತೊಂದು ವಿಶೇಷ ಕೇಂದ್ರ ಅಂಚೆ ಇಲಾಖೆ ವತಿಯಿಂದ ಇಂದು ವಿಷ್ಣುವರ್ಧನ್ ಅಂಚೆ ಲಕೋಟೆ ಬಿಡುಗಡೆ ಕಂಡಿರುವುದು ಮತ್ತೊಂದು ಸಂತಸ ತಂದಿದೆ. ಅಭಿಮಾನಿ ಗಳ ಹೃದಯ ದಲ್ಲಿ ವಿಷ್ಣು ನೆನಪು ಇನ್ನೂ ಹಸಿರಾಗಿದೆ. ಹಾಗಾಗಿ ಪ್ರತಿವರ್ಷ ಅವರ ಕುಟುಂಬ ಮತ್ತು ಹಲವು ಸಂಘ ಸಂಸ್ಥೆಗಳು ವಿಷ್ಣುವರ್ಧನ್ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತ ಬಂದಿವೆ.

ಅದೇ ರೀತಿ ನಟಿ ಶ್ರುತಿ ಸಹ ಇಂದು 45ನೇ ವಸಂತಕ್ಕೆ ಕಾಲಿಡಲಿದ್ದು, ಕುಟುಂಬ ಸದಸ್ಯರ ಜತೆ ಅವರು ಬರ್ತ್​ಡೇ ಆಚರಿಸಿಕೊಳ್ಳಲಿದ್ದಾರೆ. ಚತುರ್ ಭಾಷೆ ನಟಿಯಾಗಿರುವ ಶ್ರುತಿ ಸಿನಿಮಾ , ಟಿವಿ ಹಾಗೂ ರಿಯಾಲಿಟಿ ಶೋಗಳಲ್ಲೂ ಕೂಡ ಮಿಂಚಿದ್ದಾರೆ. ಇವರು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ನಲ್ಲಿ ಚಂದನವನದಲ್ಲಿ ಈ ಮೂವರು ತಾರೆಯರ ಹುಟ್ಟುಹಬ್ಬದ ಸಂಭ್ರಮ ಜೋರಾಗಿ ನಡೆಯುತ್ತಿದ್ದು , ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Cinisuddi