Dailyhunt Logo
  • Light mode
    Follow system
    Dark mode
    • Play Story
    • App Story
70 ವರ್ಷಗಳ ಬಳಿಕ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಸ್ವಿಟ್ಜರ್ಲೆಂಡ್‌

70 ವರ್ಷಗಳ ಬಳಿಕ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಸ್ವಿಟ್ಜರ್ಲೆಂಡ್‌

ಈ ಸಂಜೆ 2 weeks ago

ವ್ಯಾಂಕೂವರ್‌, ಜು. 8- ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾವನ್ನು 4-3 ಗೋಲುಗಳಿಂದ ಮಣಿಸಿದ ಸ್ವಿಟ್ಜರ್ಲೆಂಡ್‌‍, ಫಿಫಾ ವಿಶ್ವಕಪ್‌ ಫುಟ್‌ಬಾಲ್‌‍ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ 70 ವರ್ಷಗಳ ಬಳಿಕ ಪ್ರವೇಶಿಸಿದೆ.ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ತಲುಪಿತು.

ಶೂಟೌಟ್‌ನಲ್ಲಿ ರೂಬೆನ್‌ ವರ್ಗಾಸ್‌‍ ನಿರ್ಣಾಯಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಮೂಲಕ ಸ್ವಿಟ್ಜರ್ಲೆಂಡ್‌ಗೆ 4-3 ಅಂತರದ ಗೆಲುವು ತಂದುಕೊಟ್ಟರು.ಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್‌ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಮತ್ತೊಂದೆಡೆ ಅರ್ಜೆಂಟೀನಾ ಮತ್ತೊಂದು ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಅಂತಿಮ ಎಂಟರ ಘಟ್ಟಕ್ಕೇರಿದೆ.

1954ರಲ್ಲಿ ಆತಿಥ್ಯ ವಹಿಸಿದ್ದ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಕ್ವಾರ್ಟರ್‌ಫೈನಲ್‌‍ ತಲುಪಿದ್ದ ಸ್ವಿಟ್ಜರ್ಲೆಂಡ್‌‍, ಇದೀಗ 70 ವರ್ಷಗಳ ಬಳಿಕ ಮತ್ತೆ ಈ ಸಾಧನೆ ಮಾಡಿದೆ.ಪಂದ್ಯದ ವೇಳೆ ಗಾಯಗೊಂಡಿದ್ದ ಯುವ ಮಿಡ್‌ಫೀಲ್ಡರ್‌ ಜೋಹಾನ್‌ ಮಂಜಾಂಬಿ ತಂಡದಲ್ಲಿ ಇರಲಿಲ್ಲ. ರೂಬೆನ್‌ ವರ್ಗಾಸ್‌‍ ಕೂಡ ತರಬೇತಿ ವೇಳೆ ಅಸ್ವಸ್ಥಗೊಂಡಿದ್ದರೂ, ನಿಯಮಿತ ಸಮಯದ ಕೊನೆಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದರು.

ಶೂಟೌಟ್‌ನಲ್ಲಿ ಕೊಲಂಬಿಯಾದ ಡೇವಿನ್ಸನ್‌ ಸಾಂಚೆಜ್‌ ಹೊಡೆದ ಪೆನಾಲ್ಟಿ ಕ್ರಾಸ್‌‍ಬಾರ್‌ಗೆ ತಾಗಿ ಹೊರಬಿದ್ದರೆ, ಕುಚೊ ಹೆರ್ನಾಂಡೆಜ್‌ ಅವರ ಪ್ರಯತ್ನವನ್ನು ಸ್ವಿಸ್‌‍ ಗೋಲ್‌ಕೀಪರ್‌ ಗ್ರೆಗರ್‌ ಕೋಬೆಲ್‌ ಅದ್ಭುತವಾಗಿ ತಡೆದಾಗ ಜಯ ಸಿಕಿತು.

ವ್ಯಾಂಕೂವರ್‌ನ ಬಿಸಿ ಪ್ಲೇಸ್‌‍ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು 52,497 ಪ್ರೇಕ್ಷಕರು ವೀಕ್ಷಿಸಿದರು. ಬಹುತೇಕ ಅಭಿಮಾನಿಗಳು ಹಳದಿ ಬಣ್ಣದ ಉಡುಪು ಧರಿಸಿ ಕೊಲಂಬಿಯಾ ತಂಡಕ್ಕೆ ಬೆಂಬಲ ಸೂಚಿಸಿದ್ದರು. ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಕೂಡ ಪಂದ್ಯ ವೀಕ್ಷಕರಲ್ಲಿ ಉಪಸ್ಥಿತರಿದ್ದರು.

ಕೊಲಂಬಿಯಾ ಅಭಿಮಾನಿಗಳ ಭಾರೀ ಬೆಂಬಲದ ನಡುವೆಯೂ ನಾವು ಮಾನಸಿಕ ದೃಢತೆ ಕಾಪಾಡಿಕೊಂಡೆವು. ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆಯೂ ತಂಡ ಉತ್ತಮ ಪ್ರದರ್ಶನ ನೀಡಿತು, ಎಂದು ಗೋಲ್‌ಕೀರ್ಪ ಗ್ರೆಗರ್‌ ಕೋಬೆಲ್‌ ಹೇಳಿದರು.

2022ರ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ಕೊಲಂಬಿಯಾ, 2014ರ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌‍ ತಲುಪಿತ್ತು. ಆದರೆ ಈ ಬಾರಿ ಅಂತಿಮ 16ರ ಹಂತದಲ್ಲೇ ತನ್ನ ಅಭಿಯಾನ ಮುಗಿಸಬೇಕಾಯಿತು.ನಮ ಕನಸು ಬಹಳ ದೊಡ್ಡದಾಗಿತ್ತು. ಇಡೀ ದೇಶ ನಮ್ಮ ಮೇಲೆ ವಿಶ್ವಾಸ ಇಟ್ಟಿತ್ತು. ಆದ್ದರಿಂದ ಈ ಸೋಲು ಇನ್ನಷ್ಟು ನೋವು ತಂದಿದೆ, ಎಂದು ಕೊಲಂಬಿಯಾ ಮಿಡ್‌ಫೀರ್ಲ್ಡ ಜಾನ್‌ ಅರಿಯಾಸ್‌‍ ಹೇಳಿದರು.

ಸ್ವಿಟ್ಜರ್ಲೆಂಡ್‌ನ ಕೋಚ್‌ ಮುರಾತ್‌ ಯಾಕಿನ್‌‍, ನಾವು ತುಂಬಾ ಶ್ರಮಪಟ್ಟಿದ್ದೇವೆ. ಈಗ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಆಡಲಿದ್ದೇವೆ. ಇದು ನಮಗೆ ಅತ್ಯಂತ ವಿಶೇಷ ಕ್ಷಣ, ಎಂದು ಸಂತಸ ವ್ಯಕ್ತಪಡಿಸಿದರು.ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ ಸಂಘಟಿತ ಮತ್ತು ಕ್ರಮಬದ್ಧ ಆಟ ಪ್ರದರ್ಶಿಸಿದರೆ, ಕೊಲಂಬಿಯಾ ಆಕ್ರಮಣಕಾರಿ ಹಾಗೂ ದೈಹಿಕ ಆಟಕ್ಕೆ ಒತ್ತು ನೀಡಿತು. ಚೆಂಡಿನ ನಿಯಂತ್ರಣದಲ್ಲಿ ಸ್ವಿಟ್ಜರ್ಲೆಂಡ್‌ಗೆ ಸ್ವಲ್ಪ ಮೇಲುಗೈ ಇತ್ತು.

ಹೆಚ್ಚುವರಿ ಸಮಯದಲ್ಲಿ ಕೊಲಂಬಿಯಾದ ಜಾನ್‌ ಲುಕುಮಿ ಅವರ ಹೆಡರ್‌ ಕ್ರಾಸ್‌‍ಬಾರ್‌ಗೆ ತಾಗಿ ಹೊರಬಿದ್ದಿದ್ದು ತಂಡದ ಅತ್ಯುತ್ತಮ ಅವಕಾಶವಾಗಿತ್ತು. ಆದರೆ ಕೊನೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಸ್‌‍ ಆಟಗಾರರು ಮೇಲುಗೈ ಸಾಧಿಸಿ ಐತಿಹಾಸಿಕ ಗೆಲುವು ದಾಖಲಿಸಿದರು.

ವ್ಯಾಂಕೂವರ್‌, ಜು. 8- ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾವನ್ನು 4-3 ಗೋಲುಗಳಿಂದ ಮಣಿಸಿದ ಸ್ವಿಟ್ಜರ್ಲೆಂಡ್‌‍, ಫಿಫಾ ವಿಶ್ವಕಪ್‌ ಫುಟ್‌ಬಾಲ್‌‍ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ 70 ವರ್ಷಗಳ ಬಳಿಕ ಪ್ರವೇಶಿಸಿದೆ.ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ತಲುಪಿತು.

Dailyhunt
Disclaimer: This content has not been generated, created or edited by Dailyhunt. Publisher: eesanje