Dailyhunt Logo
  • Light mode
    Follow system
    Dark mode
    • Play Story
    • App Story
'ಆಪರೇಷನ್‌ ಗಜ' ಕಾರ್ಯಾಚರಣೆಗೆ ಬ್ರೇಕ್‌ : ಜನರಲ್ಲಿ ಹೆಚ್ಚಿದ ಆತಂಕ

'ಆಪರೇಷನ್‌ ಗಜ' ಕಾರ್ಯಾಚರಣೆಗೆ ಬ್ರೇಕ್‌ : ಜನರಲ್ಲಿ ಹೆಚ್ಚಿದ ಆತಂಕ

ಚಿಕ್ಕಮಗಳೂರು,ನ.24-ಬೇಲೂರು ಭಾಗದಿಂದ ಮೂಡಿಗೆರೆ ಕಡೆಗೆ ಕಾಡಾನೆಗಳನ್ನು ಓಡಿಸುತ್ತಿದ್ದ ಆಪರೇಷನ್‌ ಗಜ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೀಕ್‌ ಬಿದ್ದಿರುವ ಬೆನ್ನಲ್ಲೇ, ಮೂಡಿಗೆರೆ ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹಾಗೂ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಸರ್ಕಾರ ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಅಟ್ಟದಂತೆ ಯಥಾಸ್ಥಿತಿ ಕಾಪಾಡಲು ಆದೇಶಿಸಿದ್ದು ಬಗೆಹರಿಯದ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.ಮೂಡಿಗೆರೆ ತಾಲೂಕಿನ ಬಾರದ ಹಳ್ಳಿಯಲ್ಲಿ ಬರೋಬ್ಬರಿ 17 ಕಾಡಾನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ನೂರಾರು ಗ್ರಾಮಗಳ ಜನರಲ್ಲಿ ನಡುಕ ಹುಟ್ಟಿಸಿವೆ.

ಮೂಡಿಗೆರೆ ಭಾಗದಲ್ಲಿ ಒಟ್ಟು 38ಕ್ಕೂ ಅಧಿಕ ಕಾಡಾನೆಗಳು ಇದೀಗ ಎರಡು ಪ್ರತ್ಯೇಕ ತಂಡಗಳಾಗಿ ವಿಂಗಡಣೆಯಾಗಿ ಸಂಚರಿಸುತ್ತಿವೆ. ವಿಶೇಷವಾಗಿ ಕತ್ತಲಾಗುತ್ತಿದ್ದಂತೆಯೇ ಈ ಕಾಡಾನೆಗಳ ಹಿಂಡು ಸಕ್ರಿಯವಾಗಿ ಸಂಚಾರ ಆರಂಭಿಸುತ್ತಿದ್ದು, ಅವುಗಳ ಚಲನವಲನಗಳು ಡ್ರೋನ್‌ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

ಕಾಡಾನೆಗಳ ಹಿಂಡು ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಗಳತ್ತ ನುಗ್ಗಿ ಪ್ರಾಣಹಾನಿ ಅಥವಾ ಬೆಳೆಹಾನಿ ಮಾಡದಂತೆ ತಡೆಯಲು ಅರಣ್ಯ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ.
ನೂರಾರು ಇಟಿಎ‌‍ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಿಂಡಿನ ಹಿಂದೆ-ಮುಂದೆ ನಿಂತು ಅವುಗಳ ಪ್ರತಿಯೊಂದು ನಡೆಯನ್ನೂ ಸೂಕ್ಷವಾಗಿ ಮಾನಿಟರ್‌ ಮಾಡುತ್ತಿದ್ದಾರೆ.

ಸದ್ಯಕ್ಕೆ ಆನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ, ಕಾಡಾನೆಗಳ ನೈಸರ್ಗಿಕ ನಡೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ.
ಇಡೀ ರಾತ್ರಿ ಸಿಬ್ಬಂದಿ ಜಾಗರಣೆಯಲ್ಲಿದ್ದು ಆನೆಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಗ್ರಾಮಸ್ಥರು ರಾತ್ರಿ ವೇಳೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಅಟ್ಟದಂತೆ ಯಥಾಸ್ಥಿತಿ ಕಾಪಾಡಲು ಆದೇಶಿಸಿದ್ದು ಬಗೆಹರಿಯದ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.ಮೂಡಿಗೆರೆ ತಾಲೂಕಿನ ಬಾರದ ಹಳ್ಳಿಯಲ್ಲಿ ಬರೋಬ್ಬರಿ 17 ಕಾಡಾನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ನೂರಾರು ಗ್ರಾಮಗಳ ಜನರಲ್ಲಿ ನಡುಕ ಹುಟ್ಟಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: eesanje