Dailyhunt Logo
  • Light mode
    Follow system
    Dark mode
    • Play Story
    • App Story
ಆಪರೇಷನ್‌ ಸಿಂಧೂರ್‌ ವೇಳೆ ಭಾರತದ ಎಸ್‌-400 ನಿಯೋಜನೆ ಸ್ಥಳ ತಿಳಿಯದೆ ಪರದಾಡಿದ್ದ ಪಾಕ್‌

ಆಪರೇಷನ್‌ ಸಿಂಧೂರ್‌ ವೇಳೆ ಭಾರತದ ಎಸ್‌-400 ನಿಯೋಜನೆ ಸ್ಥಳ ತಿಳಿಯದೆ ಪರದಾಡಿದ್ದ ಪಾಕ್‌

ಈ ಸಂಜೆ 2 weeks ago

'Pak deployed spies to find S-400s': Top military official

ನವದೆಹಲಿ, ಆ.28- ಭಾರತದಲ್ಲಿ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಎಲ್ಲಿ ನಿಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳಲು ಪಾಕಿಸ್ತಾನ ಹರಸಾಹಸ ನಡೆಸಿತ್ತು ಎಂದು ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ಹೇಳಿದ್ದಾರೆ.

ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡಿದ್ದ 'ಆಪರೇಷನ್‌ ಸಿಂಧೂರ್‌' ಕಾರ್ಯಾಚರಣೆ ವೇಳೆ ರಷ್ಯಾ ನಿರ್ಮಿತ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯ ಪರಿಣಾಮಕಾರಿತ್ವದಿಂದಾಗಿ ಪಾಕಿಸ್ತಾನದ ಯುದ್ಧವಿಮಾನಗಳು ಭಾರತೀಯ ಗಡಿಯ 200 ಕಿ.ಮೀ. ವ್ಯಾಪ್ತಿಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಎಸ್‌-400 ವ್ಯವಸ್ಥೆಗಳನ್ನು ಎಲ್ಲಿ ನಿಯೋಜಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪಾಕಿಸ್ತಾನ ತನ್ನಲ್ಲಿದ್ದ ಎಲ್ಲ ತಂತ್ರಗಳನ್ನು ಬಳಸಿತ್ತು. ಇದಕ್ಕಾಗಿ ಭಾರತದಲ್ಲಿದ್ದ ತನ್ನ ಗೂಢಚಾರರು ಹಾಗೂ ಸ್ಲೀಪರ್‌ ಸೆಲ್‌ಗಳನ್ನು ಸಕ್ರಿಯಗೊಳಿಸಿತ್ತು ಎಂದು ಜೀತೇಂದ್ರ ಮಿಶ್ರಾ ಹೇಳಿದ್ದಾರೆ.

ಎಸ್‌-400 ನಿಯೋಜನೆ ಸ್ಥಳಗಳನ್ನು ಪತ್ತೆಹಚ್ಚಲು ಪಾಕಿಸ್ತಾನ ಹಲವು ಮಾರ್ಗಗಳನ್ನು ಅನುಸರಿಸಿತ್ತು. ಇತರ ದೇಶಗಳಿಂದಲೂ ಉಪಗ್ರಹ ಆಧಾರಿತ ಗುಪ್ತಚರ ಮಾಹಿತಿಯನ್ನು ಪಡೆಯುತ್ತಿತ್ತು. ಪಾಕಿಸ್ತಾನದ ಯುದ್ಧವಿಮಾನಗಳು ಭಾರತೀಯ ಗಡಿಯತ್ತ ಬಂದಾಗಲೆಲ್ಲ ಎಸ್‌-400 ಅವುಗಳನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ, ಪಾಕಿಸ್ತಾನ ತನ್ನ ಸ್ಲೀಪರ್‌ ಸೆಲ್‌ಗಳನ್ನು ಸಕ್ರಿಯಗೊಳಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಚೀನಾ ಪಾಕಿಸ್ತಾನಕ್ಕೆ ಭಾರತದ ಪ್ರಮುಖ ಸೇನಾ ನೆಲೆಗಳ ಕುರಿತು ಮಾಹಿತಿ ನೀಡುತ್ತಿತ್ತು ಎಂಬ ವರದಿಗಳೂ ಇವೆ ಎಂದು ಅವರು ಹೇಳಿದ್ದಾರೆ.ಪಾಕಿಸ್ತಾನದ ರೇಡಾರ್‌ ವಿಮಾನವನ್ನು ಹೊಡೆದುರುಳಿಸಿದ ಘಟನೆಯನ್ನು ನೆನಪಿಸಿಕೊಂಡ ಜೀತೇಂದ್ರ ಮಿಶ್ರಾ, ಎಸ್‌-400 ಆಪರೇಟರ್‌ ದಾಳಿ ನಡೆಸಬೇಕೇ ಎಂದು ನನ್ನನ್ನು ಕೇಳಿದರು. ನಾನು ದಾಳಿ ನಡೆಸುವಂತೆ ಆದೇಶಿಸಿದೆ. ಸುಮಾರು 314 ಕಿ.ಮೀ. ದೂರದಲ್ಲಿದ್ದ ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಲಾಯಿತು ಎಂದು ತಿಳಿಸಿದ್ದಾರೆ. ನೆಲದಿಂದ ಆಗಸಕ್ಕೆ ಉಡಾಯಿಸುವ ಕ್ಷಿಪಣಿಯ ಮೂಲಕ ನಡೆದ ವಿಶ್ವದ ಅತ್ಯಂತ ದೂರದ ಯಶಸ್ವಿ ದಾಳಿಗಳಲ್ಲಿ ಇದೂ ಒಂದಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ನವದೆಹಲಿ, ಆ.28- ಭಾರತದಲ್ಲಿ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಎಲ್ಲಿ ನಿಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳಲು ಪಾಕಿಸ್ತಾನ ಹರಸಾಹಸ ನಡೆಸಿತ್ತು ಎಂದು ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje