Dailyhunt Logo
  • Light mode
    Follow system
    Dark mode
    • Play Story
    • App Story
ಅಭಿಮಾನ್‌ ಸ್ಟುಡಿಯೋ ಜಾಗ ಸರ್ಕಾರ ವಶಕ್ಕೆ ಪಡೆಯಲು ವಿಷ್ಣು ಸೇನೆ ಆಗ್ರಹ

ಅಭಿಮಾನ್‌ ಸ್ಟುಡಿಯೋ ಜಾಗ ಸರ್ಕಾರ ವಶಕ್ಕೆ ಪಡೆಯಲು ವಿಷ್ಣು ಸೇನೆ ಆಗ್ರಹ

ಈ ಸಂಜೆ 4 days ago

Vishnu Sena demands government to take over Abhiman Studio land

ಬೆಂಗಳೂರು,ಆ.11- ಅಭಿಮಾನ್‌ ಸ್ಟುಡಿಯೋ ಆವರಣದ 10 ಗುಂಟೆ ಜಾಗದಲ್ಲಿರುವ ಡಾ. ವಿಷ್ಣುವರ್ಧನ್‌ ಸಮಾಧಿಯನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಬಳಿ ವಿಷ್ಣು ಸೇನ ಸಂಘದ ರಾಜ್ಯಾಧ್ಯಕ್ಷ ರಾಜು ಗೌಡ ಮನವಿ ಮಾಡಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಪಿ.ಎಸ್‌‍.ಕಾಂತರಾಜು ಅವರು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ, ಎಮ್‌ ಎಸ್‌‍ ಬಿಲ್ಡಿಂಗ್‌ ಹಾಗು ಅರಣ್ಯ ಇಲಾಖೆ ಗಳಿಗೆ ಹತ್ತಾರು ಬಾರಿ ಮನವಿ ಕೊಟ್ಟರು ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ.ಇದು ಕನ್ನಡವನ್ನೇ ಹುಸಿರಾಗಿಸಿಕೊಂಡಿದ್ದ ಮೇರು ನಟ ವಿಷ್ಣುವರ್ಧನ್‌ ಮತ್ತು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಸಭೆಯಲ್ಲಿ ರಾಜುಗೌಡರು ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಉನ್ನತ ಮಟ್ಟದ ಸಭೆ ಕರೆದು ಅರಣ್ಯ ಹಾಗು ಕಂದಾಯ ಇಲಾಖೆ ಅಧಿಕಾರಿಗಳು ಸಭೆ ಕರೆದು ಮಾತನಾಡುತ್ತೇವೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಿಂದ 10 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ನಾವು ವರದಿಯನ್ನು ರಾಜ್ಯ ಎಸ್‌‍ ಐ ಟಿ ತಂಡಕ್ಕೆ ಕಳುಹಿಸಿದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಮೇರು ನಟ ಕರ್ನಾಟಕ ರತ್ನ ಡಾಕ್ಟರ್‌ ವಿಷ್ಣುವರ್ಧನ್‌ ರವರ ಪುಣ್ಯ ಭೂಮಿಯ 10ಗುಂಟೆ ಜಾಗದ ವಿಚಾರ ಹಾಗೂ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಅಭಿಮಾನ್‌ ಸ್ಟುಡಿಯೋ ಜಾಗದ ವಿರುದ್ಧ ಕ್ರಮ ತೆಗೆದುಕೊಂಡಿರುವ ಬಗ್ಗೆ, ಇನ್ನು ಹಲವು ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು.

ಹಿರಿಯ ಹೈಕೋರ್ಟ್‌ ವಕೀಲರು ಕೆ ಎಸ್‌‍ ಅರುಣ್‌, ವಿಷ್ಣು ಕಟ್ಟೆ ನಾರಾಯಣ್‌ ,ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್‌ ಬೊಮಸಂದ್ರ, ಕ್ರಾಂತಿ ರಾಜು ಹಾಗೂ ವೆಂಕಟೇಶ್‌ ಗೌಡ್ರು, ರಾಜಪ್ಪ, ರಾಜಾಹುಲಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು,ಆ.11- ಅಭಿಮಾನ್‌ ಸ್ಟುಡಿಯೋ ಆವರಣದ 10 ಗುಂಟೆ ಜಾಗದಲ್ಲಿರುವ ಡಾ. ವಿಷ್ಣುವರ್ಧನ್‌ ಸಮಾಧಿಯನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಬಳಿ ವಿಷ್ಣು ಸೇನ ಸಂಘದ ರಾಜ್ಯಾಧ್ಯಕ್ಷ ರಾಜು ಗೌಡ ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje