Dailyhunt Logo
  • Light mode
    Follow system
    Dark mode
    • Play Story
    • App Story
ಅಫ್ಘಾನಿಸ್ತಾನದ 10 ಸ್ಥಳಗಳ ಮೇಲೆ ಪಾಕ್ ವಾಯುದಾಳಿ

ಅಫ್ಘಾನಿಸ್ತಾನದ 10 ಸ್ಥಳಗಳ ಮೇಲೆ ಪಾಕ್ ವಾಯುದಾಳಿ

ಈ ಸಂಜೆ 2 days ago

ಪೇಶಾವರ, ಸೆ.24- ಪಾಕಿಸ್ತಾನದ ಮೇಲೆ ಡ್ರೋನ್‌ ದಾಳಿಗೆ ಮುಂದಾಗಿದೆ ಎಂದು ಆರೋಪಿಸಿ ಅಫ್ಘಾನಿಸ್ತಾನದ 10 ಸ್ಥಳಗಳ ಮೇಲೆ ಪಾಕಿಸ್ತಾನ ಗುರುವಾರ ವಾಯುದಾಳಿ ನಡೆಸಿದೆ. ಈ ಬೆಳವಣಿಗೆ ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಫ್ಘಾನಿಸ್ತಾನದ ತಾಲಿಬಾನ್‌ ಪಡೆಗಳು ಪಾಕಿಸ್ತಾನದ ಗಡಿ ಠಾಣೆಗಳ ಮೇಲೆ ದಾಳಿ ನಡೆಸಿ ಎಂಟು ಡ್ರೋನ್‌ಗಳನ್ನು ಹಾರಿಸಿದ್ದವು ಎಂದು ಪಾಕಿಸ್ತಾನ ಆರೋಪಿಸಿದೆ.

ಗಡಿಯಾಚೆಯಿಂದ ಉಗ್ರರು ಒಳನುಸುಳಲು ನಡೆಸಿದ ಯತ್ನವನ್ನು ಪಾಕಿಸ್ತಾನಿ ಪಡೆಗಳು ವಿಫಲಗೊಳಿಸಿದ ಬಳಿಕ ಈ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ, ತಾಲಿಬಾನ್‌ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ಅವರು ಅಫ್ಘಾನ್‌ ಪಡೆಗಳು ಯಾವುದೇ ದಾಳಿ ನಡೆಸಿಲ್ಲ ಎಂದು ನಿರಾಕರಿಸಿದ್ದಾರೆ.

ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್‌ ಸಾಮಾಜಿಕ ಮಾಧ್ಯಮದ ಮೂಲಕ ವಾಯುದಾಳಿಯನ್ನು ದೃಢಪಡಿಸಿದ್ದಾರೆ. ಅಫ್ಘಾನಿಸ್ತಾನದಿಂದ ಉಡಾಯಿಸಲಾಗಿದೆ ಎನ್ನಲಾದ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದ್ದು, ಅವುಗಳಿಂದ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಕಾಬೂಲ್‌ ಮತ್ತು ಇಸ್ಲಾಮಾಬಾದ್‌ ನಡುವೆ ಶಾಶ್ವತ ಶಾಂತಿ ಸ್ಥಾಪಿಸಲು ಚೀನಾ, ಟರ್ಕಿ, ಕತಾರ್‌ ಹಾಗೂ ಸೌದಿ ಅರೇಬಿಯಾ ನಡೆಸುತ್ತಿರುವ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಇತ್ತೀಚಿನ ಬೆಳವಣಿಗೆಗಳು ಅಡ್ಡಿಯಾಗುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನದ ತಾಲಿಬಾನ್‌ ಪಡೆಗಳು ಪಾಕಿಸ್ತಾನದ ಗಡಿ ಠಾಣೆಗಳ ಮೇಲೆ ದಾಳಿ ನಡೆಸಿ ಎಂಟು ಡ್ರೋನ್‌ಗಳನ್ನು ಹಾರಿಸಿದ್ದವು ಎಂದು ಪಾಕಿಸ್ತಾನ ಆರೋಪಿಸಿದೆ. ಗಡಿಯಾಚೆಯಿಂದ ಉಗ್ರರು ಒಳನುಸುಳಲು ನಡೆಸಿದ ಯತ್ನವನ್ನು ಪಾಕಿಸ್ತಾನಿ ಪಡೆಗಳು ವಿಫಲಗೊಳಿಸಿದ ಬಳಿಕ ಈ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ, ತಾಲಿಬಾನ್‌ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ಅವರು ಅಫ್ಘಾನ್‌ ಪಡೆಗಳು ಯಾವುದೇ ದಾಳಿ ನಡೆಸಿಲ್ಲ ಎಂದು ನಿರಾಕರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje