Dailyhunt Logo
  • Light mode
    Follow system
    Dark mode
    • Play Story
    • App Story
ಅಂದು ಮೇಕೆದಾಟು ನಾಟಕ ಮಾಡಿ ಇಂದು ಮೌನವಾಗಿರೋದೇಕೆ..? : ಅಶೋಕ್‌ ತರಾಟೆ

ಅಂದು ಮೇಕೆದಾಟು ನಾಟಕ ಮಾಡಿ ಇಂದು ಮೌನವಾಗಿರೋದೇಕೆ..? : ಅಶೋಕ್‌ ತರಾಟೆ

ಈ ಸಂಜೆ 2 weeks ago

ಬೆಂಗಳೂರು,ಜು.3- ಅಂದು ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆಯ ನಾಟಕವಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗ ತಮಿಳುನಾಡು ಕಾಂಗ್ರೆಸ್‌‍ ಮುಂದೆ ಮೌನವ್ರತ ಮಾಡುತ್ತಿರುವುದೇಕೆ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿಎಂ ಶಿವಕುಮಾರ್‌ ಅವರೇ, ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವುದಕ್ಕಾಗಿ ಮೇಕೆದಾಟು ಪಾದಯಾತ್ರೆಯ ಬೀದಿನಾಟಕ ಮಾಡಿದ್ದಿರಲ್ಲ ಸ್ವಾಮಿ, ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ?

ನಿಮದೇ ಕಾಂಗ್ರೆಸ್‌‍ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರು ಮೇಕೆದಾಟಿಗೆ ಒಂದು ಇಟ್ಟಿಗೆ ಹಾಕಲೂ ಬಿಡುವುದಿಲ್ಲ ಎಂದು ಕರ್ನಾಟಕಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

ನಿಮಗೆ ತಾಕತ್ತಿದ್ದರೆ, ಧಮಿದ್ದರೆ, ಕನ್ನಡಿಗರ ಮೇಲೆ ನಿಜವಾದ ಕಾಳಜಿಯಿದ್ದರೆ, ಈಗ ಚೆನ್ನೈಗೆ ಪಾದಯಾತ್ರೆ ಮಾಡಿ ಅಲ್ಲಿನ ತಮಿಳುನಾಡು ಕಾಂಗ್ರೆಸ್‌‍ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತು ನಿಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಅಂದು ವೋಟು ಗಿಟ್ಟಿಸಿಕೊಳ್ಳಲು ಪಾದಯಾತ್ರೆಯ ನಾಟಕವಾಡಿದ ನೀವು ಈಗ ತಮಿಳುನಾಡಿನ ಮೈತ್ರಿ ರಾಜಕಾರಣಕ್ಕೆ ಹೆದರಿ ತಲೆಮರೆಸಿಕೊಂಡಿದ್ದೀರಾ? ಕಾವೇರಿ ಕೊಳ್ಳದ ನಮ ರೈತರ ಮತ್ತು ಬೆಂಗಳೂರಿನ ಕೋಟ್ಯಂತರ ಜನರ ಕುಡಿಯುವ ನೀರಿನ ಹಕ್ಕಿಗಿಂತ ನಿಮಗೆ ದೆಹಲಿ ಹೈಕಮಾಂಡ್‌ ಆಣತಿ ಮತ್ತು ತಮಿಳುನಾಡಿನ ಮೈತ್ರಿ ರಾಜಕಾರಣವೇ ಹೆಚ್ಚಾಯಿತೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡಿಗರ ರಕ್ತ ಹೀರುತ್ತಿರುವ ಈ ನಾಡದ್ರೋಹಿ ಕಾಂಗ್ರೆಸ್‌‍ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯೇ ಇಲ್ಲ. ಅಂದು ಕೇವಲ ಚುನಾವಣಾ ಗಿಮಿಕ್‌ ಮಾಡಲು ಮೇಕೆದಾಟು ಹೆಸರನ್ನು ಬಳಸಿಕೊಂಡ ಇವರು, ಇಂದು ತಮಿಳುನಾಡು ಕಾಂಗ್ರೆಸ್‌‍ನ ಉದ್ಧಟತನದ ಹೇಳಿಕೆಗೆ ಕನಿಷ್ಠ ಖಂಡನೆ ವ್ಯಕ್ತಪಡಿಸಲೂ ಹೆದರುತ್ತಿರುವುದು ನಾಚಿಕೆಗೇಡು. ನಿಮ ಈ ವಿಶ್ವಾಸಘಾತುಕ ರಾಜಕಾರಣಕ್ಕೆ ಮತ್ತು ಕನ್ನಡಿಗರಿಗೆ ಮಾಡಿದ ನಂಬಿಕೆ ದ್ರೋಹಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅಶೋಕ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿಎಂ ಶಿವಕುಮಾರ್‌ ಅವರೇ, ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವುದಕ್ಕಾಗಿ ಮೇಕೆದಾಟು ಪಾದಯಾತ್ರೆಯ ಬೀದಿನಾಟಕ ಮಾಡಿದ್ದಿರಲ್ಲ ಸ್ವಾಮಿ, ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ? ನಿಮದೇ ಕಾಂಗ್ರೆಸ್‌‍ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರು ಮೇಕೆದಾಟಿಗೆ ಒಂದು ಇಟ್ಟಿಗೆ ಹಾಕಲೂ ಬಿಡುವುದಿಲ್ಲ ಎಂದು ಕರ್ನಾಟಕಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje