Dailyhunt Logo
  • Light mode
    Follow system
    Dark mode
    • Play Story
    • App Story
ಅಪರೂಪದ ಚಿಪ್ಪು ಹಂದಿ ರಕ್ಷಣೆ

ಅಪರೂಪದ ಚಿಪ್ಪು ಹಂದಿ ರಕ್ಷಣೆ

ಈ ಸಂಜೆ 4 years ago

ಬೆಂಗಳೂರು, ಅ. 27- ಗೊರಗುಂಟೆಪಾಳ್ಯದ ಅಂಚೆಪಾಳ್ಯ ರಸ್ತೆಯಲ್ಲಿ ಪತ್ತೆಯಾದ ಅಪರೂಪದ ಇಂಡಿಯನ್ ಪೆಂಗುಲಿಯನ್ (ಚಿಪ್ಪು ಹಂದಿ)ಯನ್ನು ರಕ್ಷಣೆ ಮಾಡಲಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುವುದು ಎಂದು ಬಿಬಿಎಂಪಿ ಅರಣ್ಯ ಘಟಕದ ಸಹಾಯಕ ಅರಣ್ಯಾಕಾರಿ ಗೋವಿಂದ್‍ರಾಜು ತಿಳಿಸಿದ್ದಾರೆ.

ಅಪರೂಪದ ಚಿಪ್ಪು ಹಂದಿ ಅಳಿವಿನ ಅಂಚಿನಲ್ಲಿದ್ದು ಔಷ ಗುಣ ಹೊಂದಿರುವ ಈ ಪ್ರಾಣಿಯನ್ನು ಮೆಡಿಷನ್, ಜಾಕೆಟ್ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗು ತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಚಿಪ್ಪಿಗೆ 30 ಲಕ್ಷ ರೂಪಾಯಿ ಗಳಾಗಿದ್ದು ಭಾರೀ ಬೇಡಿಕೆ ಇದೆ.

ಕೆಲವರು ಈ ಪ್ರಾಣಿಯನ್ನು ಹತ್ಯೆಗೈದು ದೇಶ, ವಿದೇಶಗಳಿಗೆ ಸ್ಮಗ್ಲಿಂಗ್ ಕೂಡ ಮಾಡುತ್ತಾರೆ. ಇಂತಹ ಅಪರೂಪದ ವನ್ಯಜೀವಿಯನ್ನು ಸಂರಕ್ಷಿಸಲು ಒತ್ತು ನೀಡಲಾಗುವುದು, ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಾಗಿದೆ ಎಂದು ಗೋವಿಂದ್‍ರಾಜ್ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: eesanje