Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು : ಅಂಗಡಿಯೊಂದರಲ್ಲಿ ಬೆಂಕಿ ಬಿದ್ದು ಗ್ಯಾಸ್‌‍ 23 ಸಿಲಿಂಡರ್‌ಗಳು ಸ್ಫೋಟ

ಬೆಂಗಳೂರು : ಅಂಗಡಿಯೊಂದರಲ್ಲಿ ಬೆಂಕಿ ಬಿದ್ದು ಗ್ಯಾಸ್‌‍ 23 ಸಿಲಿಂಡರ್‌ಗಳು ಸ್ಫೋಟ

ಈ ಸಂಜೆ 11 hrs ago

ಬೆಂಗಳೂರು,ಅ.25- ನಗರದ ಕಮಗೊಂಡನಹಳ್ಳಿಯಲ್ಲಿನ ಅಂಗಡಿಯೊಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ 23 ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಅಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಹೋಗಿವೆ.ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಗಂಗಮನಗುಡಿ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನ ಕಮಗೊಂಡನಹಳ್ಳಿಯ ಮಳಿಗೆಯೊಂದರಲ್ಲಿ ಗ್ಯಾಸ್‌‍ ಸಿಲಿಂಡರ್‌ಗಳು, ಪೆಟ್ರೋಲ್‌, ಡೀಸಲ್‌ ಹಾಗೂ ಸೀಮೆಎಣ್ಣೆಯನ್ನು ಮಾರಾಟ ಮಾಡಲಾಗುತ್ತಿತ್ತು. ರಾತ್ರಿ ಸುಮಾರು 8.30 ರ ಸಮಯದಲ್ಲಿ ಈ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಲ್ಲಿಟ್ಟಿದ್ದ 6 ಕೆಜಿ ತೂಕದ 23 ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸ್ಫೋಟಗೊಂಡಿವೆ.

ಪರಿಣಾಮ ಅಂಗಡಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಅಲ್ಲಿದ್ದ ಆಯಿಲ್‌ ಹಾಗೂ ಇನ್ನಿತರ ವಸ್ತುಗಳೆಲ್ಲವೂ ಸುಟ್ಟು ಹೋಗಿವೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೂರು ವಾಹನಗಳೊಂದಿಗೆ ಸ್ಥಳಕ್ಕೆ ದಾವಿಸಿ ಬಂದು ಬೆಂಕಿಯನ್ನು ನಂದಿಸಿದ್ದಾರೆ.

ಈ ಅಂಗಡಿಯಲ್ಲಿ ಇಂಧನಗಳ ದಾಸ್ತಾನು ಮಾಡಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಗಂಗಮನಗುಡಿ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು,ಅ.25- ನಗರದ ಕಮಗೊಂಡನಹಳ್ಳಿಯಲ್ಲಿನ ಅಂಗಡಿಯೊಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ 23 ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಅಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಹೋಗಿವೆ.ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಗಂಗಮನಗುಡಿ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje