Dailyhunt
ಭಾರತದಲ್ಲಿ 4 ಲಕ್ಷದ ಗಡಿ ದಾಟಿದ ಕರೋನ ಸಾವಿನ ಸಂಖ್ಯೆ..!

ಭಾರತದಲ್ಲಿ 4 ಲಕ್ಷದ ಗಡಿ ದಾಟಿದ ಕರೋನ ಸಾವಿನ ಸಂಖ್ಯೆ..!

ಈ ಸಂಜೆ 4 years ago

ನವದೆಹಲಿ, ಜು.2-ದೇಶದಲ್ಲಿ ಒಂದೇ ದಿನದಲ್ಲಿ 46617 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,04,58,251 ಕೋಟಿಗೆ ಏರಿಕೆಯಾಗಿದ್ದರೂ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.97ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ 853 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ ನಾಲ್ಕು ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.97.1ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 5,09,637 ಲಕ್ಷಕ್ಕೆ ಕುಸಿದಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿನ್ನೆ ಒಂದೇ ದಿನ ಸುಮಾರು 19 ಲಕ್ಷ ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ಇದುವರೆಗೂ 41 ಕೋಟಿಗೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿದಂತಾಗಿದೆ.

ಕಳೆದ 25 ದಿನಗಳಿಂದ ಪಾಸಿಟಿವಿಟಿ ರೇಟ್ ಶೇ.5ರೊಳಗೆ ದಾಖಲಾಗುತ್ತಿದ್ದು, ಇಂದು ಪಾಸಿಟಿವಿಟಿ ರೇಟ್ ಶೇ.2.48ರಷ್ಟಿದೆ ಎಂದು ಗೊತ್ತಾಗಿದೆ. ಮೂರು ಕೋಟಿ ಸೋಂಕಿತರ ಪೈಕಿ ಈಗಾಗಲೇ ಈಗಾಗಲೇ 2.95 ಕೋಟಿಗೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje