Thursday, 29 Jul, 11.26 am ಈ ಸಂಜೆ

ರಾಷ್ಟ್ರೀಯ ಸುದ್ದಿ
ಭಾರತದಲ್ಲಿ ಶುರುವಾಯ್ತಾ 3ನೇ ಅಲೆ..? ಒಂದೇ ದಿನ 43,509 ಮಂದಿಗೆ ಪಾಸಿಟಿವ್..!

ನವದೆಹಲಿ,ಜು.29-ದೇಶದಲ್ಲಿ ಮತ್ತೆ 43,509 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 3.15 ಕೋಟಿ ಗಡಿ ದಾಟಿದೆ.ಸೋಂಕು ಹೆಚ್ಚಳಗೊಳ್ಳುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ಸಕ್ರಿಯ ಸೋಂಕು ಪ್ರಕರಣದಲ್ಲೂ ಏರಿಕೆ ಕಂಡು ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿನ್ನೆಯಿಂದ ಮಹಾಮಾರಿಗೆ 640 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,22,662 ಲಕ್ಷಕ್ಕೆ ಏರಿಕೆಯಾಗಿದೆ.ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.97.38 ರಷ್ಟಿದ್ದರೂ ಸೋಂಕು ಹೆಚ್ಚುತ್ತಿರುವುದರಿಂದ ಸಕ್ರೀಯ ಸೋಂಕು ಪ್ರಕರಣಗಳು 4,03,840 ಲಕ್ಷಕ್ಕೆ ಹೆಚ್ಚಳಗೊಂಡಿದೆ.

3.15 ಕೋಟಿ ಸೋಂಕಿತರ ಪೈಕಿ ಈಗಾಗಲೇ 3.7 ಕೋಟಿ ಸೋಂಕಿತರು ಗುಣಮುಖರಾಗಿದ್ದರೆ, ಸಾವಿನ ಪ್ರಮಾಣ ಶೇ,1.34 ರಷ್ಟಿದೆ ಎಂದು ವರದಿಯಾಗಿದೆ. ದಿನೇ ದಿನೇ ಲಸಿಕೆ ಹಾಕುವ ಕಾರ್ಯವನ್ನು ಹೆಚ್ಚಿಸಲಾಗುತ್ತಿದ್ದು, ಇದುವರೆಗೂ 45.07 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top