ಲಂಡನ್, ಸೆ.24- ರಷ್ಯಾ ವಿರುದ್ಧದ ಯುದ್ಧಕ್ಕೆ ಭಾರತ, ನೇಪಾಳ, ಘಾನಾ ಸೇರಿದಂತೆ 47 ದೇಶಗಳ ನಾಗರಿಕರನ್ನು ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಷ್ಯಾ ತನ್ನ ಯುದ್ಧದಲ್ಲಿ 47 ದೇಶಗಳ ನಾಗರಿಕರನ್ನು ಬಳಸಿಕೊಳ್ಳುತ್ತಿದೆ ಎಂಬುದು ನಮಗೆ ತಿಳಿದಿದೆ.
ಭಾರತ, ಘಾನಾ, ನೇಪಾಳ, ತಜಕಿಸ್ತಾನ, ಯೆಮೆನ್, ಕೀನ್ಯಾ, ಜಿಂಬಾಬ್ವೆ, ಕ್ಯೂಬಾ, ಬೆಲಾರಸ್, ಸುಡಾನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ ನಾಗರಿಕರನ್ನು ಯುದ್ಧಕ್ಕೆ ಎಳೆದು ತರುತ್ತಿದೆ. ಆದ್ದರಿಂದ ಸಂಬಂಧಪಟ್ಟ ದೇಶಗಳು ತಮ್ಮ ನಾಗರಿಕರನ್ನು ಈ ಸಂಘರ್ಷಕ್ಕೆ ಎಳೆದು ತರುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.
ಕೆಲವು ವಿದೇಶಿ ಪ್ರಜೆಗಳು ಮೋಸಹೋಗುವ ಮೂಲಕ ರಷ್ಯಾವನ್ನು ತಲುಪಿದ್ದಾರೆ. ಸಂಬಂಧಪಟ್ಟ ದೇಶಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪುಟಿನ್ ನಿಮ್ಮ ಜನರನ್ನು ಈ ಯುದ್ಧಕ್ಕೆ ಎಳೆದುಕೊಂಡು ಹೋಗಲು ಬಿಡಬೇಡಿ ಎಂದು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಅವರು ಒತ್ತಾಯಿಸಿದರು.
ಇದೇ ವೇಳೆ, ಉತ್ತರ ಕೊರಿಯಾದೊಂದಿಗಿನ ರಷ್ಯಾದ ಮಿಲಿಟರಿ ಸಂಬಂಧಗಳ ಬಗ್ಗೆಯೂ ಝೆಲೆನ್ಸ್ಕಿ ಪ್ರಸ್ತಾಪಿಸಿದರು. ಜೊತೆಗೆ ಫಿನ್‌ಲ್ಯಾಂಡ್ ಜತೆಗಿನ ಡ್ರೋನ್ ಖರೀದಿ ಒಪ್ಪಂದ ಹಾಗೂ ಆಸ್ಟ್ರೇಲಿಯಾದೊಂದಿಗಿನ ಭದ್ರತಾ ಒಪ್ಪಂದಗಳನ್ನೂ ಉಲ್ಲೇಖಿಸಿದರು.
ಚಳಿಗಾಲದಲ್ಲಿ ರಷ್ಯಾ ತನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ರಷ್ಯಾದ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸುವ ಮೂಲಕ ಉಕ್ರೇನ್ ಪ್ರತಿಕ್ರಿಯಿಸಲಿದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.
ಮುಂಬರುವ ಚಳಿಗಾಲ ಕಠಿಣವಾಗಿರಬಹುದು ಎಂಬುದು ಉಕ್ರೇನ್ ಜನರಿಗೆ ಅರ್ಥವಾಗಿದೆ. ಆದರೆ, ಉಕ್ರೇನ್ ಮೇಲೆ ನಡೆಯುವ ದಾಳಿಗಳಿಗೆ ಪ್ರತಿಯಾಗಿ ರಷ್ಯಾ ಅದರ ಪರಿಣಾಮವನ್ನು ಅನುಭವಿಸುವಂತೆ ಮಾಡಲು ಕೀವ್ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಷ್ಯಾ ತನ್ನ ಯುದ್ಧದಲ್ಲಿ 47 ದೇಶಗಳ ನಾಗರಿಕರನ್ನು ಬಳಸಿಕೊಳ್ಳುತ್ತಿದೆ ಎಂಬುದು ನಮಗೆ ತಿಳಿದಿದೆ. ಭಾರತ, ಘಾನಾ, ನೇಪಾಳ, ತಜಕಿಸ್ತಾನ, ಯೆಮೆನ್, ಕೀನ್ಯಾ, ಜಿಂಬಾಬ್ವೆ, ಕ್ಯೂಬಾ, ಬೆಲಾರಸ್, ಸುಡಾನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ ನಾಗರಿಕರನ್ನು ಯುದ್ಧಕ್ಕೆ ಎಳೆದು ತರುತ್ತಿದೆ. ಆದ್ದರಿಂದ ಸಂಬಂಧಪಟ್ಟ ದೇಶಗಳು ತಮ್ಮ ನಾಗರಿಕರನ್ನು ಈ ಸಂಘರ್ಷಕ್ಕೆ ಎಳೆದು ತರುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.

