Dailyhunt Logo
  • Light mode
    Follow system
    Dark mode
    • Play Story
    • App Story
ಬೀದರ್‌ : ಪೆಟ್ರೋಲ್‌ ಬಂಕ್‌ನಲ್ಲಿ ಬೆಂಕಿ, ವ್ಯಕ್ತಿ ಸಜೀವ ದಹನ

ಬೀದರ್‌ : ಪೆಟ್ರೋಲ್‌ ಬಂಕ್‌ನಲ್ಲಿ ಬೆಂಕಿ, ವ್ಯಕ್ತಿ ಸಜೀವ ದಹನ

ಈ ಸಂಜೆ 2 days ago

ಬೆಂಗಳೂರು,ಅ.22- ಪೆಟ್ರೋಲ್‌ ಬಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದರೊಳಗೆ ಮಲಗಿದ್ದ ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘಟನೆ ಬೀದರ್‌ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ.

ಸಜೀವ ದಹನವಾದ ವ್ಯಕ್ತಿಯನ್ನು ಬಾಲಾಜಿ ದಾಸೂರ ಎಂದು ಗುರುತಿಸಲಾಗಿದೆ.

ದಸರಾ ಹಿನ್ನೆಲೆಯಲ್ಲಿ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರಜೆ ಮೇಲೆ ಹೋಗಿದ್ದರು. ಮೊನ್ನೆ ರಾತ್ರಿ ಬಾಲಾಜಿ ಬಂಕ್‌ನ ಕಚೇರಿಯಲ್ಲಿ ಒಬ್ಬರೇ ಮಲಗಿದ್ದರು. ನಿನ್ನೆ ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ಬಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ತಮ ವಾಹನಗಳ ಜೊತೆ ಸ್ಥಳಕ್ಕೆ ಧಾವಿಸಿ ಬಂದು ಬೆಂಕಿಯನ್ನು ನಂದಿಸಿದರಾದರೂ ಆ ವೇಳೆಗಾಗಲೇ ಬಂಕ್‌ನ ಅರ್ಧದಷ್ಟು ಭಾಗ ಬೆಂಕಿಯಲ್ಲಿ ಸುಟ್ಟು ಹೋಗಿತ್ತು.

ಬಂಕ್‌ನಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಮನ್ನಾಎಖ್ಖೇಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಜೀವ ದಹನವಾದ ವ್ಯಕ್ತಿಯನ್ನು ಬಾಲಾಜಿ ದಾಸೂರ ಎಂದು ಗುರುತಿಸಲಾಗಿದೆ. ದಸರಾ ಹಿನ್ನೆಲೆಯಲ್ಲಿ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರಜೆ ಮೇಲೆ ಹೋಗಿದ್ದರು. ಮೊನ್ನೆ ರಾತ್ರಿ ಬಾಲಾಜಿ ಬಂಕ್‌ನ ಕಚೇರಿಯಲ್ಲಿ ಒಬ್ಬರೇ ಮಲಗಿದ್ದರು. ನಿನ್ನೆ ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ಬಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje