Dailyhunt Logo
  • Light mode
    Follow system
    Dark mode
    • Play Story
    • App Story
ಬಿಗ್ ಶಾಕ್ : ವಾಣಿಜ್ಯ ಬಳಕೆ ಸಿಲಿಂಡರ್‌ ದರ 993 ರೂ. ಏರಿಕೆ..!

ಬಿಗ್ ಶಾಕ್ : ವಾಣಿಜ್ಯ ಬಳಕೆ ಸಿಲಿಂಡರ್‌ ದರ 993 ರೂ. ಏರಿಕೆ..!

ಈ ಸಂಜೆ 0 months ago

Centre hikes commercial LPG prices by Rs 993 amid global energy crisis

ನವದೆಹಲಿ, ಮೇ 1- ವಿಶ್ವ ಕಾರ್ಮಿಕ ದಿನಾಚರಣೆ ದಿನವೇ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ದಿಢೀರ್‌ ಏರಿಕೆಯಾಗಿದೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬರೋಬ್ಬರಿ 993 ರೂ.

ಹೆಚ್ಚಿಸಲಾಗಿದೆ.ಈ ಭಾರಿ ಏರಿಕೆಯ ನಂತರ, ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 3,071.50 ರೂ.ಗೆ ತಲುಪಿದೆ. ಇದು ಹೋಟೆಲ್‌‍, ರೆಸ್ಟೋರೆಂಟ್‌ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ 2,078.50 ರೂಪಾಯಿ ಇತ್ತು. ಬೆಂಗಳೂರಿನಲ್ಲಿ 991 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಒಂದು ಕಮರ್ಷಿಯಲ್‌ ಸಿಲಿಂಡರ್‌ ಬೆಲೆ ಬರೋಬ್ಬರಿ 3,152 ರೂ. ಆಗಲಿದೆ.ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆಯಾಗಿದ್ದರೂ, ಗೃಹ ಬಳಕೆಯ (14.2 ಕೆಜಿ) ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜಾಗತಿಕ ಇಂಧನ ಬೆಲೆಗಳ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ.ಈ ಏರಿಕೆಯು ಹೋಟೆಲ್‌‍, ರೆಸ್ಟೋರೆಂಟ್‌ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಉಂಟುಮಾಡಲಿದ್ದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ.

ಗೃಹ ಬಳಕೆ ಗ್ರಾಹಕರಿಗೆ ನಿರಾಳ: ಪೆಟ್ರೋಲ್‌‍, ಡೀಸೆಲ್‌ ಮತ್ತು ದೇಶೀಯ ಸಿಲಿಂಡರ್‌ ದರ ಸ್ಥಿರ ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆಯಾಗಿದ್ದರೂ, ಸಾರ್ವಜನಿಕರಿಗೆ ನೇರವಾಗಿ ಅನ್ವಯವಾಗುವ ಪ್ರಮುಖ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ದೇಶದಲ್ಲಿ ಸುಮಾರು 33 ಕೋಟಿ ಗ್ರಾಹಕರು ಬಳಸುವ 14.2 ಕೆಜಿ ದೇಶೀಯ ಸಿಲಿಂಡರ್‌ ಬೆಲೆಗಳು ಯಥಾಸ್ಥಿತಿಯಲ್ಲಿರುವುದು ಗ್ರಾಹಕರಲ್ಲಿ ನಿರಾಳತೆ ಮೂಡಿಸಿದೆ.ವಾಹನ ಸವಾರರು ಬಳಸುವ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸಲಾಗುವ ಸೀಮೆಎಣ್ಣೆಯ ಬೆಲೆಗಳು ಕೂಡ ಬದಲಾಗದೆ ಉಳಿದಿವೆ ಎಂದು ವರದಿಯಾಗಿದೆ.

ಎಟಿಎಫ್‌ ಬೆಲೆ ಯಥಾಸ್ಥಿತಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗಿದ್ದರೂ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ವಿಮಾನಯಾನ ಟರ್ಬೈನ್‌ ಇಂಧನ ಬೆಲೆಗಳಲ್ಲೂ ಯಾವುದೇ ಬದಲಾವಣೆಯಾಗಿಲ್ಲ.ಗ್ರಾಹಕರು ಮತ್ತು ವಿಮಾನಯಾನ ಸಂಸ್ಥೆಗಳನ್ನು ರಕ್ಷಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತರರಾಷ್ಟ್ರೀಯ ಬೆಲೆ ಏರಿಕೆಯ ಹೊರೆಯನ್ನು ತಾವೇ ಹೊರಲು ನಿರ್ಧರಿಸಿವೆ ಎಂದು ಐಒಸಿ ತಿಳಿಸಿದೆ.

ಆದರೆ, ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ.ತೈಲ ಮಾರುಕಟ್ಟೆ ಕಂಪನಿಗಳ ಈ ನಿರ್ಧಾರದಿಂದಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು ಶೇ 80 ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಬಹುಪಾಲು ಗ್ರಾಹಕರಿಗೆ ಸ್ಥಿರತೆಯನ್ನು ಖಚಿತಪಡಿಸಿದೆ.

ಶೇ.4 ರಷ್ಟು ಉತ್ಪನ್ನಗಳು ಬೆಲೆ ಇಳಿಕೆಯನ್ನು ಕಂಡಿದ್ದರೆ, ಕೇವಲ ಶೇ.16 ರಷ್ಟು ಇಂಧನಗಳು (ಮುಖ್ಯವಾಗಿ ಕೈಗಾರಿಕಾ ಬಳಕೆಯವು) ಬೆಲೆ ಏರಿಕೆಯನ್ನು ದಾಖಲಿಸಿವೆ.ಅಂತಾರಾಷ್ಟ್ರೀಯ ಬೆಲೆ ಏರಿಳಿತಗಳಿಂದ ದೇಶೀಯ ಗ್ರಾಹಕರನ್ನು ರಕ್ಷಿಸುವ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಒಸಿ ಸ್ಪಷ್ಟಪಡಿಸಿದೆ.

ನವದೆಹಲಿ, ಮೇ 1- ವಿಶ್ವ ಕಾರ್ಮಿಕ ದಿನಾಚರಣೆ ದಿನವೇ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ದಿಢೀರ್‌ ಏರಿಕೆಯಾಗಿದೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬರೋಬ್ಬರಿ 993 ರೂ. ಹೆಚ್ಚಿಸಲಾಗಿದೆ.ಈ ಭಾರಿ ಏರಿಕೆಯ ನಂತರ, ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 3,071.50 ರೂ.ಗೆ ತಲುಪಿದೆ. ಇದು ಹೋಟೆಲ್‌‍, ರೆಸ್ಟೋರೆಂಟ್‌ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: eesanje