Dailyhunt Logo
  • Light mode
    Follow system
    Dark mode
    • Play Story
    • App Story
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅತ್ಯಾಧುನಿಕ ತಾರಾಲಯ ಲೋಕಾರ್ಪಣೆ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅತ್ಯಾಧುನಿಕ ತಾರಾಲಯ ಲೋಕಾರ್ಪಣೆ

ಮೈಸೂರು,ನ.13- ಸಾಂಸ್ಕೃತಿಕ ನಗರಿ ಮೈಸೂರಿನ ವಿಜ್ಞಾನ ಮತ್ತು ಖಗೋಳ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸೇರ್ಪಡೆಯಾಗಿದೆ. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ COSMOS&Mysuru Planetariumಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ನಿರ್ಮಾಣಗೊಂಡಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ಯೋಜನೆಗೆ ಅನುದಾನ ದೊರೆತಿದೆ. 2022ರಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

15 ಮೀಟರ್‌ ಎಲ್‌ಇಡಿ ಡೋಮ್‌ ಪ್ರಮುಖ ಆಕರ್ಷಣೆ
ತಾರಾಲಯದ ಪ್ರಮುಖ ಆಕರ್ಷಣೆಯಾಗಿರುವ 15 ಮೀಟರ್‌ ವ್ಯಾಸದ ಔಉಈ ಈಟಞಛಿ ಖ ಛಿಠ್ಟಿಛಿ ಪ್ರೇಕ್ಷಕರಿಗೆ ವಿಶಿಷ್ಟ ಬಾಹ್ಯಾಕಾಶ ಅನುಭವ ನೀಡಲಿದೆ. ಸುಮಾರು 42.7 ಮಿಲಿಯನ್‌ ಪಿಕ್ಸೆಲ್‌ಗಳ 8ಓ ದೃಶ್ಯ ಗುಣಮಟ್ಟ, 160 ಡಿಗ್ರಿ ವೀಕ್ಷಣಾ ಕೋನ ಹಾಗೂ 6,148 ಎಲ್‌ಇಡಿ ಪ್ಯಾನೆಲ್‌ಗಳನ್ನು ಹೊಂದಿರುವ ಈ ವ್ಯವಸ್ಥೆ ಅತ್ಯಾಧುನಿಕ ತಂತ್ರಜ್ಞಾನದಿಂದ ರೂಪುಗೊಂಡಿದೆ.

್ಠ್ಟ ಏಟಞಛಿ, ್ಠ್ಟ ಇಟಞಟ ಹೆಸರಿನ 12 ನಿಮಿಷಗಳ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರಿನ ಇತಿಹಾಸ, ಸಂಸ್ಕೃತಿ ಮತ್ತು ಖಗೋಳ ವಿಜ್ಞಾನದ ನಡುವಿನ ಸಂಬಂಧವನ್ನು ಪರಿಚಯಿಸಲಾಗುತ್ತದೆ. ಇಟಞಟ ಛಿ ಮತ್ತು ್ಖಟಜಛ್ಟಿ ಸೇರಿದಂತೆ ವಿವಿಧ ಪ್ರದರ್ಶನಗಳು ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಿರಲಿವೆ.

ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯ ವೇದಿಕೆ
ತಾರಾಲಯದಲ್ಲಿ ಎರಡು ಪ್ರದರ್ಶನ ಸಭಾಂಗಣಗಳು, ಸಂವಾದಾತಕ ಖಗೋಳ ಮಾದರಿಗಳು, ತರಬೇತಿ ಕೇಂದ್ರ, ಕಂಪ್ಯೂಟರ್‌ ಲ್ಯಾಬ್‌, ಮ್ಯೂಸಿಯಂ, ಹೊರಾಂಗಣ ಪ್ರದರ್ಶನ ಪ್ರದೇಶ ಹಾಗೂ ಆಂಫಿಥಿಯೇಟರ್‌ ಸೌಲಭ್ಯಗಳಿವೆ.ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಕಾರ್ಯಾಗಾರಗಳು, ಶಿಕ್ಷಕರ ತರಬೇತಿ, ಗ್ರಾಮೀಣ ಶಾಲೆಗಳಿಗಾಗಿ ವಿಶೇಷ ಕಾರ್ಯಕ್ರಮಗಳು, ಸೂರ್ಯ ವೀಕ್ಷಣೆ ಮತ್ತು ರಾತ್ರಿ ಆಕಾಶ ವೀಕ್ಷಣೆಯಂತಹ ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶವಿದೆ.

ಒಟ್ಟಾರೆ, ಇಖಖ-್ಠ್ಟ್ಠ ತಾರಾಲಯವು ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡುವುದರ ಜೊತೆಗೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ವಿಜ್ಞಾನ ಮತ್ತು ಖಉ ಶಿಕ್ಷಣಕ್ಕೆ ಹೊಸ ಅವಕಾಶಗಳನ್ನು ತೆರೆದಿಡುವ ಈ ಯೋಜನೆ ಮೈಸೂರಿನ ಹೆಮೆಯ ಆಕರ್ಷಣೆಯಾಗಲಿದೆ.

ಮೈಸೂರು,ನ.13- ಸಾಂಸ್ಕೃತಿಕ ನಗರಿ ಮೈಸೂರಿನ ವಿಜ್ಞಾನ ಮತ್ತು ಖಗೋಳ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸೇರ್ಪಡೆಯಾಗಿದೆ. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ COSMOS&Mysuru Planetariumಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: eesanje