ಅಂತಾರಾಷ್ಟ್ರೀಯ ಸುದ್ದಿ
ಚಂಡಮಾರುತದ ಅಬ್ಬರಕ್ಕೆ ಮುಳುಗಿದ ದ್ವೀಪ ರಾಷ್ಟ್ರ ತೈವಾನ್.!
ಥೈಪೆ, ಸೆ.12- ಟೈಪಾನ್ ಚಂತು ಚಂಡಮಾರುತ ಅಬ್ಬರಿಸುತ್ತಿದ್ದು, ಭಾನುವಾರ ಥೈವಾನ್ ಅನ್ನು ಸಂಪೂರ್ಣ ಮುಳುಗಿಸಿದೆ. ಗಂಟೆಗೆ 162 ಕಿಲೋ ಮೀಟರ್ ವೇಗದಲ್ಲಿ ಮುನ್ನುಗ್ಗುತ್ತಿರುವ ಚಂಡ ಮಾರುತ 198 ಕಿಲೋ ಮೀಟರ್‍ಗೆ ವೃದ್ಧಿಸುವ ಸಾಧ್ಯತೆ ಇದೆ. ಭಾನುವಾರದ ಮಧ್ಯಾಹ್ನದ ವೇಳೆಗೆ ಥೈವಾನ್‍ನ ಈಶಾನ್ಯ ಕರಾವಳಿಯಿಂದ 70 ಕಿಲೋ ಮೀಟರ್ ಅಂತರದಲ್ಲಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ 41 ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೀನುಗಾರಿಕೆಗೆ ತೆರಳಿದ 3400 ದೋಣಿಗಳು ವಾಪಾಸ್ ಬಂದಿವೆ. ಮೀನುಗಾರಿಕೆಯಲ್ಲಿ ತೊಡಗಿದ್ದ 20 ಸಾವಿರ ಮಂದಿ ಸಮುದ್ರದಲ್ಲಿ ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆ ಸೂಚಿಸಲಾಗಿದೆ. ಎರಡು ಸಾವಿರ ಮಂದಿಯನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.
ಭಾನುವಾರ ಕೆಲ ಪ್ರದೇಶಗಳಲ್ಲಿ 13 ಸೆಂಟಿ ಮಿಟರ್ ಮಳೆಯಾಗಿದೆ. ಇದು ಮುಂದುವರೆದು 20 ಸೆಂಟಿಮೀಟರ್‍ಗೆ ಹೆಚ್ಚಾಗುವ ಸಾಧ್ಯತೆ ಇದೆ. ಭಾರೀ ಮಳೆ ದ್ವೀಪ ರಾಷ್ಟ್ರವನ್ನು ಮುಳುಗಿಸಿದೆ.
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje