Dailyhunt
ಚೀನಾದ ಸಿಸಿಟಿವಿ ಕ್ಯಾಮೆರಾ ವಿಚಾರ : ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಗರಂ

ಚೀನಾದ ಸಿಸಿಟಿವಿ ಕ್ಯಾಮೆರಾ ವಿಚಾರ : ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಗರಂ

ಈ ಸಂಜೆ 3 weeks ago

Chinese CCTVs: Rahul alleges Modi govt putting Indians' security at risk

ನವದೆಹಲಿ, ಏ.4- ಚೀನಾದ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಡೆಯುವ ವಿದೇಶಿ ನಿಗಾವ್ಯವಸ್ಥೆಯ ವಾಸ್ತವಿಕತೆಯನ್ನು ಮರೆಮಾಚುವ ಮೂಲಕ ಮೋದಿ ಸರ್ಕಾರ ದೇಶದ ಪ್ರತಿಯೊಬ್ಬ ಭಾರತೀಯರ ಭದ್ರತೆಯನ್ನು ಅಪಾಯಕ್ಕೆ ಒಳಪಡಿಸುತ್ತಿದೆ ಎಂದು ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ತಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಚೀನಾ ದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರಿ ಕಚೇರಿಗಳ ಒಳಗೆ ಇಂದಿಗೂ ಅದೇ ಚೀನೀ ಕ್ಯಾಮೆರಾಗಳು ರಾರಾಜಿಸುತ್ತಿವೆ. ನಿಷೇಧಿತ ಚೀನೀ ಆಯಪ್‌ಗಳು ಹೊಸ ರೂಪದಲ್ಲಿ, ಬೇರೆ ಹೆಸರುಗಳೊಂದಿಗೆ ಮರಳಿ ಬರುತ್ತಿವೆ. ವಿದೇಶಿ ಎಐ ಪ್ಲಾಟ್‌ಫಾರ್ಮ್‌ಗಳು ನಮ ಸೂಕ್ಷ್ಮ ದತ್ತಾಂಶಗಳನ್ನು ಬಳಸಿಕೊಳ್ಳುತ್ತಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಸರ್ಕಾರದ ಬಳಿ ಉತ್ತರವಿಲ್ಲ ಎಂದು ಆರೋಪಿಸಿದ್ಧಾರೆ.

ಸಂಸತ್ತಿನಲ್ಲಿ ಈ ಬಗ್ಗೆ ನಾನು ಎಲೆಕ್ಟ್ರಾನಿಕ್ಸ್‌‍ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಪ್ರಶ್ನಿಸ್ದೆಿ. ಅವರ ಉತ್ತರದಲ್ಲಿ ಅತಿ ಹೆಚ್ಚಿನ ವಿಷಯಗಳಿದ್ದರೂ, ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರ ಇರಲಿಲ್ಲ.

ನಮ ದೇಶದಲ್ಲಿರುವ ಕ್ಯಾಮೆರಾಗಳು ಯಾವ ದೇಶದವು? ಅವುಗಳಲ್ಲಿ ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಲಾಗಿತ್ತು. ಯಾವ ವಿದೇಶಿ ಎಐ ಪ್ಲಾಟ್‌ಫಾರ್ಮ್‌ಗಳು ಸರ್ಕಾರದ ದತ್ತಾಂಶವನ್ನು ಬಳಸುತ್ತಿವೆ? ನಿಷೇಧಿತ ಯಾವ ಆಯಪ್‌ಗಳು ಹೆಸರು ಬದಲಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ? ಎಂದು ತಾವು ಕೇಳಿದಾಗ, ಸಚಿವಾಲಯ ನೀಡಿದ ಉತ್ತರದಲ್ಲಿ ಈ ಬಗ್ಗೆ ಯಾವುದೇ ಅಂಕಿ-ಅಂಶವಾಗಲಿ, ವಿವರವಾಗಲಿ ಅಥವಾ ಕನಿಷ್ಠ ಒಂದು ಪ್ಲಾಟ್‌ಫಾರ್ಮ್‌ ಹೆಸರಾಗಲಿ ಇರಲಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಬಳಸುತ್ತಿರುವ ಸುಮಾರು ಒಂದು ಕೋಟಿ ಚೀನೀ ಕ್ಯಾಮೆರಾಗಳಿಂದ ದತ್ತಾಂಶ ಸೋರಿಕೆಯ ಅಪಾಯವಿದೆ ಎಂದು ಐದು ವರ್ಷಗಳ ಹಿಂದೆಯೇ ಸರ್ಕಾರ ಒಪ್ಪಿಕೊಂಡಿತ್ತು. ಆದರೂ, ಇಂದು ನಮ ಮೇಲೆ ಕಣ್ಗಾವಲಿನಲ್ಲಿಟ್ಟಿರುವ ಕ್ಯಾಮೆರಾಗಳು ಚೀನಾ ನಿರ್ಮಿತವಾಗಿವೆ. ಇವುಗಳು ಸುರಕ್ಷಿತವೇ ಎಂಬ ಬಗ್ಗೆ ಸರ್ಕಾರ ಉತ್ತರ ನೀಡುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿ ದೇಶವನ್ನು ಕತ್ತಲಲ್ಲಿಡುವ ಪಿತೂರಿಯೇ? ವಿದೇಶಿ ಕಣ್ಗಾವಲಿನ ಸತ್ಯವನ್ನು ಮರೆಮಾಚುವ ಮೂಲಕ ಮೋದಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಡುತ್ತಿದೆಯೇ? ಪ್ರತಿಯೊಬ್ಬ ನಾಗರಿಕನ ಭದ್ರತೆಯನ್ನು ಇದು ಅಪಾಯಕ್ಕೆ ದೂಡುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದ್ಧಾರೆ.

ಕೇಂದ್ರ ಸರ್ಕಾರದ ಪ್ರತಿಕ್ರಿಯೆ:
ಮಾರ್ಚ್‌ 25ರಂದು ಗಾಂಧಿ ಕೇಳಿದ ಪ್ರಶ್ನೆಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಜಿತಿನ್‌ ಪ್ರಸಾದ ಉತ್ತರ ನೀಡಿದ್ದರು. ಡಿಜಿಟಲ್‌ ತಂತ್ರಜ್ಞಾನಗಳಿಂದ ಉಂಟಾಗುವ ಸೈಬರ್‌ ಭದ್ರತಾ ಅಪಾಯಗಳ ಬಗ್ಗೆ ಸರ್ಕಾರ ಜಾಗರೂಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿರುವ ಅವರು, ದೂರಸಂಪರ್ಕ ಜಾಲಗಳ ಭದ್ರತೆ ಬಲಪಡಿಸುವುದು, ನೆಟ್‌ವರ್ಕ್‌ ಸುರಕ್ಷತೆ ಮತ್ತು ಡೇಟಾ ರಕ್ಷಣೆಗೆ ಕಾನೂನು ಚೌಕಟನ್ನ ಬಲಪಡಿಸುವುದು, ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳ ಭದ್ರತೆ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

2021ರಲ್ಲಿ ಟ್ರಸ್ಟೆಡ್‌ ಸೋರ್ಸಸ್‌‍ ರಾಷ್ಟ್ರೀಯ ಭದ್ರತಾ ನಿರ್ದೇಶನ ಜಾರಿಗೆ ತಂದು, ವಿಶ್ವಾಸಾರ್ಹ ಮೂಲಗಳಿಂದ ಬಂದ ಉಪಕರಣಗಳನ್ನಷ್ಟೇ ದೂರಸಂಪರ್ಕ ಜಾಲಗಳಲ್ಲಿ ಬಳಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದಲ್ಲದೆ, ಟೆಲಿಕಮ್ಯುನಿಕೇಷನ್‌ ಕಾಯ್ದೆ 2023 ಮತ್ತು ಡಿಜಿಟಲ್‌ ಪರ್ಸನಲ್‌ ಡೇಟಾ ಪೊಟೆಕ್ಷನ್‌ ಕಾಯ್ದೆ 2022 ಮೂಲಕ ವೈಯಕ್ತಿಕ ಡೇಟಾ ರಕ್ಷಣೆಗೆ ಕಾನೂನು ಬಲ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳ ಭದ್ರತೆಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕಡ್ಡಾಯ ತಾಂತ್ರಿಕ ಮಾನದಂಡಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ನವದೆಹಲಿ, ಏ.4- ಚೀನಾದ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಡೆಯುವ ವಿದೇಶಿ ನಿಗಾವ್ಯವಸ್ಥೆಯ ವಾಸ್ತವಿಕತೆಯನ್ನು ಮರೆಮಾಚುವ ಮೂಲಕ ಮೋದಿ ಸರ್ಕಾರ ದೇಶದ ಪ್ರತಿಯೊಬ್ಬ ಭಾರತೀಯರ ಭದ್ರತೆಯನ್ನು ಅಪಾಯಕ್ಕೆ ಒಳಪಡಿಸುತ್ತಿದೆ ಎಂದು ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje