Dailyhunt
ದಸರಾ ಅಂಬಾರಿ ಆನೆ ಅರ್ಜುನನ ಭವ್ಯ ಸ್ಮಾರಕ ಲೋಕಾರ್ಪಣೆ

ದಸರಾ ಅಂಬಾರಿ ಆನೆ ಅರ್ಜುನನ ಭವ್ಯ ಸ್ಮಾರಕ ಲೋಕಾರ್ಪಣೆ

ಈ ಸಂಜೆ 1 week ago

Dussehra Ambari Arjuna Grand Memorial Lokarpana

ಹಾಸನ,ಮೇ 7- ನಾಡಹಬ್ಬ ಮೈಸೂರು ದಸರಾದಲ್ಲಿ 8 ಭಾರಿ ಚಿನ್ನದ ಅಂಬಾರಿ ಹೊತ್ತ ಕನ್ನಡಿಗರ ಅಚ್ಚುಮೆಚ್ಚಿನ ಆನೆ ಅರ್ಜುನನ ಭವ್ಯ ಸಾರಕವನ್ನು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿ ಕಟ್ಟೆ ಅರಣ್ಯದಲ್ಲಿ ಪರಿಸರ ಸಚಿವ ಈಶ್ವರ್‌ ಖಂಡ್ರೆ ಲೋಕಾರ್ಪಣೆಗೊಳಿಸಿದರು.

2023ರ ಡಿಸೆಂಬರ್‌ 4ರಂದು ದಬ್ಬಳ್ಳಿ ಕಟ್ಟೆ ಮೀಸಲು ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗಿನ ಕಾದಾಟದಲ್ಲಿ ಅರ್ಜುನ(64) ವೀರಮರಣವನ್ನಪ್ಪಿದ್ದ. ಡಿಸೆಂಬರ್‌ 5ರಂದು ಆತ ಮೃತಪಟ್ಟ ಸ್ಥಳದಲ್ಲೇ ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿತ್ತು. ಸುಮಾರು ಎರಡೂವರೆ ವರ್ಷಗಳ ನಂತರ ಆತನ ಸಮಾಧಿಯ ಮೇಲೆಯೇ ನಿರ್ಮಿಸಲಾದ ಆಕರ್ಷಕ ಪ್ರತಿಕೃತಿ ಇದೀಗ ಲೋಕಾರ್ಪಣೆಯಾಗಿದೆ.

ಅರ್ಜುನನನ್ನು ಮಣ್ಣು ಮಾಡಿದ್ದ ಜಾಗದಲ್ಲೇ ಆತನ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ೈಬರ್‌ ಬಳಸಿ ಭವ್ಯ ಮೂರ್ತಿಯನ್ನು ನಿರ್ಮಿಸಲಾಗಿದೆ.10 ಅಡಿ ಎತ್ತರ ಹಾಗೂ 13 ಅಡಿ ಉದ್ದವಿರುವ ಈ ಮೂರ್ತಿ ಅರ್ಜುನನ ಮೂಲ ಸ್ವರೂಪವನ್ನೇ ಹೋಲುತ್ತದೆ. ಶಿಲ್ಪಿ ಧನಂಜಯ ಅವರು ಈ ಸುಂದರ ಮೂರ್ತಿಯನ್ನು ಕೆತ್ತಿದ್ದು, ನೋಡುಗರ ಕಣ್ಣಿಗೆ ಸಾಕ್ಷಾತ್‌ ಅರ್ಜುನನೇ ಮೇಲೆದ್ದು ನಿಂತಂತೆ ಭಾಸವಾಗುತ್ತದೆ.

ಅರ್ಜುನನ ಈ ಸುಂದರ ಮೂರ್ತಿಯನ್ನು ಶಿಲ್ಪಿಗಳು ಒಂದು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದರು. ಆದರೆ ಸಾರಕ ನಿರ್ಮಾಣ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದ ಕಾರಣ ಉದ್ಘಾಟನೆ ವಿಳಂಬವಾಗಿತ್ತು. ಇದೀಗ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಅರ್ಜುನನ ಸಮಾಧಿ ಸ್ಥಳದಲ್ಲಿ ಸಾರಕವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದ ಶ್ರೀಯಸ್‌‍ ಪಟೇಲ್‌‍, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿಮೆಂಟ್‌ ಮಂಜು, ಸಿಸಿಎ‌‍ ಏಡುಕುಂಡಲ, ಡಿಸಿಎ‌‍ ಸೌರಭ್‌ ಕುಮಾರ್‌, ಜಿಲ್ಲಾಧಿಕಾರಿ ಕೆ.ಎಸ್‌‍. ಲತಾಕುಮಾರಿ ಹಾಗೂ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಶುಭಾನ್ವಿತಾ ಉಪಸ್ಥಿತರಿದ್ದರು.

ಅರ್ಜುನನ ಸೇವೆ ಸರಣೀಯ: ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅರ್ಜುನನದ್ದು. 60ಕ್ಕೂ ಹೆಚ್ಚು ವರ್ಷ ಕಾಡಾನೆ ಸೆರೆ ಕಾರ್ಯಾಚರಣೆ, ದಸರಾ ಸೇರಿದಂತೆ ನಾಡಿನ ಸೇವೆಯಲ್ಲಿ ತೊಡಗಿದ್ದ ಅರ್ಜುನನ ಸಾರಕ ಇದೀಗ ಪ್ರವಾಸಿಗರು ಹಾಗೂ ಆತನ ಅಭಿಮಾನಿಗಳಿಗೆ ಭಾವನಾತಕ ತಾಣವಾಗಿ ರೂಪುಗೊಂಡಿದೆ.ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳಿಯ ಆಡಳಿತ ಸಮನ್ವಯದೊಂದಿಗೆ ಸಾರ್ವಜನಿಕರಿಗೆ ಸಾರಕ ವೀಕ್ಷಣೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಹಾಸನ,ಮೇ 7- ನಾಡಹಬ್ಬ ಮೈಸೂರು ದಸರಾದಲ್ಲಿ 8 ಭಾರಿ ಚಿನ್ನದ ಅಂಬಾರಿ ಹೊತ್ತ ಕನ್ನಡಿಗರ ಅಚ್ಚುಮೆಚ್ಚಿನ ಆನೆ ಅರ್ಜುನನ ಭವ್ಯ ಸಾರಕವನ್ನು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿ ಕಟ್ಟೆ ಅರಣ್ಯದಲ್ಲಿ ಪರಿಸರ ಸಚಿವ ಈಶ್ವರ್‌ ಖಂಡ್ರೆ ಲೋಕಾರ್ಪಣೆಗೊಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: eesanje