ನವದೆಹಲಿ, ಅ.25- ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ದಾಖಲೆಯ 114 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಇದಾಗಿದ್ದು, ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 30 ಚಿನ್ನ, 35 ಬೆಳ್ಳಿ ಹಾಗೂ 49 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಒಟ್ಟು 114 ಪದಕಗಳನ್ನು ತಮದಾಗಿಸಿಕೊಂಡಿದ್ದಾರೆ. ಈ ಮೂಲಕ ಹಿಂದಿನ ಆವೃತ್ತಿಯಲ್ಲಿ ದಾಖಲಿಸಿದ್ದ ಪದಕಗಳ ಸಾಧನೆಯನ್ನು ಮೀರಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಭಾರತೀಯ ಪ್ಯಾರಾ ಕ್ರೀಡಾಪಟುಗಳ ಅಸಾಧಾರಣ ಸಾಧನೆ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದ್ದಾರೆ. ತಂಡದ ಪ್ರತಿಯೊಬ್ಬ ಕ್ರೀಡಾಪಟುವೂ ಈ ಐತಿಹಾಸಿಕ ಯಶಸ್ಸಿಗೆ ಕೊಡುಗೆ ನೀಡಿದ್ದು, ಅವರ ಸಾಧನೆ ಅಸಂಖ್ಯಾತ ಭಾರತೀಯರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತದಿಂದ 168 ಪ್ಯಾರಾ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಹಿಂದಿನ ಆವೃತ್ತಿಯಲ್ಲಿ 309 ಕ್ರೀಡಾಪಟುಗಳು ಭಾಗವಹಿಸಿದ್ದರು. ಸ್ಪರ್ಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ, ಭಾರತ ಪದಕಗಳ ಸಂಖ್ಯೆಯಲ್ಲಿ ಹೊಸ ದಾಖಲೆ ನಿರ್ಮಿಸಿರುವುದು ವಿಶೇಷವಾಗಿದೆ.ಹಿಂದಿನ ಆವೃತ್ತಿಯಲ್ಲಿ ಭಾರತ 27 ಚಿನ್ನ, 32 ಬೆಳ್ಳಿ ಮತ್ತು 49 ಕಂಚು ಸೇರಿದಂತೆ ಒಟ್ಟು 108 ಪದಕಗಳನ್ನು ಅಧಿಕೃತವಾಗಿ ತನ್ನದಾಗಿಸಿಕೊಂಡಿತ್ತು. ಈ ಬಾರಿ 114 ಪದಕಗಳನ್ನು ಗೆಲ್ಲುವ ಮೂಲಕ ತನ್ನ ಹಿಂದಿನ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.
ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಭಾರತದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಪುರುಷರ ಸಿಂಗಲ್ಸ್ ಎಸ್ಎಲ್3 ವಿಭಾಗದ ಫೈನಲ್ನಲ್ಲಿ ನಿತೇಶ್ ಕುಮಾರ್ ಅವರು ಭಾರತದವರೇ ಆದ ಪ್ರಮೋದ್ ಭಗತ್ ಅವರನ್ನು 21-18, 21-16 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಪ್ರಮೋದ್ ಭಗತ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಮಹಿಳೆಯರ ಡಬಲ್ಸ್ ಎಸ್ಎಲ್3-ಎಸ್ಯು5 ವಿಭಾಗದಲ್ಲಿ ತುಳಸಿಮತಿ ಮುರುಗೇಶನ್ ಮತ್ತು ಮಾನಸಿ ಜೋಶಿ ಜೋಡಿ ಚಿನ್ನದ ಪದಕ ಗೆದ್ದು ಗಮನ ಸೆಳೆಯಿತು. ಮಹಿಳೆಯರ ಸಿಂಗಲ್್ಸ ವಿಭಾಗದಲ್ಲಿಯೂ ತುಳಸಿಮತಿ ಬೆಳ್ಳಿ ಪದಕ ಪಡೆದರು.
ಅಥ್ಲೆಟಿಕ್ಸ್ ನಲ್ಲಿ ದಾಖಲೆಗಳ ಸುರಿಮಳೆ:
ಭಾರತದ ಪ್ಯಾರಾ ಅಥ್ಲೀಟ್ಗಳು ಜಾವೆಲಿನ್ ಎಸೆತ, ಓಟ ಮತ್ತು ಕ್ಲಬ್ ಥ್ರೋ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಹ್ಯಾನಿ:
ಪುರುಷರ ಜಾವೆಲಿನ್ ಥ್ರೋ ಎಫ್37/38 ವಿಭಾಗದಲ್ಲಿ 60.49 ಮೀಟರ್ ಎಸೆದು ಚಿನ್ನದ ಪದಕದೊಂದಿಗೆ ವಿಶ್ವ ದಾಖಲೆಯ ಸಾಧನೆ ಮಾಡಿದರು.
ಸಂದೀಪ್:
ಪುರುಷರ 400 ಮೀಟರ್ ಟಿ64 ಓಟದಲ್ಲಿ 52.28 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.
ಸುಮಿತ್:
ಜಾವೆಲಿನ್ ಎಸೆತದಲ್ಲಿ 72.46 ಮೀಟರ್ ದೂರ ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಪ್ರಣವ್ ಸೂರ್ಮ:
ಪುರುಷರ ಕ್ಲಬ್ ಥ್ರೋ ಎಫ್51 ವಿಭಾಗದಲ್ಲಿ 32.87 ಮೀಟರ್ ದೂರ ಎಸೆದು ಕ್ರೀಡಾಕೂಟದ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು.ಇದಲ್ಲದೆ, ಮಹೇಂದ್ರ ಗುರ್ಜರ್ ಮತ್ತು ಸಂದೀಪ್ ಸಂಜಯ್ ಸರ್ಗರ್ ಸೇರಿದಂತೆ ಹಲವು ಕ್ರೀಡಾಪಟುಗಳು ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದು ಭಾರತದ ಪದಕ ಪಟ್ಟಿಗೆ ಕೊಡುಗೆ ನೀಡಿದ್ದಾರೆ.
ಶೂಟಿಂಗ್, ಬಿಲ್ಲುಗಾರಿಕೆ ವಿಭಾಗದಲ್ಲೂ ಯಶಸ್ಸು:
ಪ್ಯಾರಾ ಶೂಟಿಂಗ್ನಲ್ಲಿ ಮೋನಾ ಅಗರ್ವಾಲ್ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್್ಸ ಎಸ್ಎಚ್1 ವಿಭಾಗದಲ್ಲಿ 357.5 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ಈ ಸಾಧನೆಯೊಂದಿಗೆ ಅವರು ವಿಶ್ವ ಮತ್ತು ಏಷ್ಯನ್ ಪ್ಯಾರಾ ಕ್ರೀಡಾಕೂಟದ ದಾಖಲೆಗಳನ್ನು ನಿರ್ಮಿಸಿದರು.
ಬಿಲ್ಲುಗಾರಿಕೆಯಲ್ಲಿ ಹರ್ವಿಂದರ್ ಸಿಂಗ್ ಮತ್ತು ವಿಜಯ್ ಸುಂದಿ ಪುರುಷರ ರಿಕರ್ವ್ ಡಬಲ್್ಸ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಮಹಿಳೆಯರ ರಿಕರ್ವ್ ಡಬಲ್ಸ್ ನಲ್ಲಿ ಪೂಜಾ ಜತ್ಯಾನ್ ಮತ್ತು ಭಾವನಾ ಚೌಧರಿ ಬೆಳ್ಳಿ ಪದಕ ಪಡೆದರು.ಟೇಬಲ್ ಟೆನಿಸ್ನಲ್ಲಿ ಜೆಹಾನ್ ದೊರಾಬ್ ಮದನ್ ಮತ್ತು ಶುಭಮ್ ವಾಧ್ವಾ ಜೋಡಿ ಕಂಚಿನ ಪದಕ ಗೆದ್ದರೆ, ಪ್ಯಾರಾ ಈಜಿನಲ್ಲಿ ಹಿಮಾಂಶು ನಂದಲ್ 100 ಮೀಟರ್ ಫ್ರೀಸ್ಟೆ ಫೈಲ್ ಎಸ್11 ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ದೇಶದ ಕ್ರೀಡಾ ಸಾಧನೆಗೆ ಹೊಸ ಮೈಲಿಗಲ್ಲು:
ಪ್ಯಾರಾ ಅಥ್ಲೆಟಿಕ್ಸ್ , ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ, ಶೂಟಿಂಗ್, ಟೇಬಲ್ ಟೆನಿಸ್ ಮತ್ತು ಈಜು ಸೇರಿದಂತೆ ಹಲವು ಕ್ರೀಡಾ ವಿಭಾಗಗಳಲ್ಲಿ ಭಾರತೀಯರು ಪದಕ ಗೆದ್ದಿರುವುದು ತಂಡದ ಸಾಮರ್ಥ್ಯವನ್ನು ತೋರಿಸಿದೆ.
ದೈಹಿಕ ಸವಾಲುಗಳನ್ನು ಮೆಟ್ಟಿ ನಿಂತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳ ಪರಿಶ್ರಮ, ಆತವಿಶ್ವಾಸ ಮತ್ತು ಛಲಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ. 114 ಪದಕಗಳ ಐತಿಹಾಸಿಕ ಸಾಧನೆಯು ಭಾರತದ ಪ್ಯಾರಾ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಿದ್ದು, ಭವಿಷ್ಯದ ಕ್ರೀಡಾಪಟುಗಳಿಗೆ ಪ್ರೇರಣೆಯಾಗುವ ನಿರೀಕ್ಷೆಯಿದೆ
ನವದೆಹಲಿ, ಅ.25- ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ದಾಖಲೆಯ 114 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಇದಾಗಿದ್ದು, ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಸುಮಿತ್:
ಜಾವೆಲಿನ್ ಎಸೆತದಲ್ಲಿ 72.46 ಮೀಟರ್ ದೂರ ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

